ಡಿ.12ರಿಂದ ಕದ್ರಿ ಬಾಲಯಕ್ಷಕೂಟದಿಂದ ‘ದಶಮ ಸಂಭ್ರಮ’

Update: 2018-12-11 17:30 GMT

ಮಂಗಳೂರು, ಡಿ.11: ಬಾಲ ಯಕ್ಷಕೂಟ ಕದ್ರಿ ಹತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ‘ದಶಮ ಸಂಭ್ರಮ’ ಕಾರ್ಯಕ್ರಮ ಡಿ.12 ರಿಂದ 16ರವರೆಗೆ ನಗರದ ಕದ್ರಿ ಮಂಜುನಾಥ ದೇವಸ್ಥಾನ ಆವರಣದಲ್ಲಿ ನಡೆಯಲಿದೆ ಎಂದು ಬಾಲಯಕ್ಷ ಕೂಟ ಕದ್ರಿ ದಶಮಾನೋತ್ಸವ ಸಮಿತಿ ಸಂಚಾಲಕ ಎಲ್ಲೂರು ರಾಮಚಂದ್ರ ಭಟ್ ಕದ್ರಿ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.12ರಂದು ಸಂಜೆ 6ಗಂಟೆಗೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಕಾರ್ುಕ್ರಮ ಉದ್ಘಾಟಿಸಲಿದ್ದಾರೆ ಎಂದರು.

ಡಿ.12ರಂದು ಸಂಜೆ 4 ಗಂಟೆಯಿಂದ 6 ಗಂಟೆವರಗೆ ದಿನೇಶ್ ಕೋಡಪದವು ಸಾರಥ್ಯದಲ್ಲಿ ‘ಯಕ್ಷ ಹಾಸ್ಯ ಸಿಂಚನ’ ನಡೆಯಲಿದೆ. ಸಂಜೆ 7ಗಂಟೆಗೆ ಕದ್ರಿ ದಿ. ರಾಮಚಂದ್ರ ದೇವಾಡಿಗ ಇವರ ಸಂಸ್ಮರಣೆ ನಡೆಯಲಿದ್ದು, ಸಂಜೆ 7.30ಕ್ಕೆ ಬಾಲಯಕ್ಷ ಕೂಟದ ಕಲಾವಿದರಿಂದ ‘ಸುದರ್ಶನ ಗರ್ವಭಂಗ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು.

ಡಿ.13ರಂದು ಸಂಜೆ 5 ಗಂಟೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಯಕ್ಷಕೂಟ ಕಲಾವಿದರಿಂದ ‘ಕರಂಡಕಾಸುರ ವಧೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸಂಜೆ 7 ಗಂಟೆಗೆ ದಿ. ಶಂಕರನಾರಾಯಣ ಅಡಿಗ ಕದ್ರಿ ಅವರ ಸಂಸ್ಮರಣೆ ನಡೆಯಲಿದೆ. ರಾತ್ರಿ 7.30ರಿಂದ 10 ಗಂಟೆರೆಗೆ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಮಹಿಳಾ ಕಲಾವಿದೆಯರಿಂದ ‘ಹರಿಭಕ್ತ ಸುಧನ್ವ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.

ಡಿ.15ರಂದು ಮಧ್ಯಾಹ್ನ 3 ಗಂಟೆಯಿಂದ ಪ್ರಸಿದ್ಧ ಕಲಾವಿದರಿಂದ ‘ವಾಲಿಮೋಕ್ಷ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ 7 ಗಂಟೆಗೆ ದಿ. ಬಾಲಕೃಷ್ಣ ಶೆಟ್ಟಿ ಕದ್ರಿ ಸಂಸ್ಮರಣೆ ಬಳಿಕ ಸಂಜೆ 7.30 ಯಿಂದ ಪ್ರಸಿದ್ಧ ಕಲಾವಿದರಿಂದ ‘ಕದಂಬ ಮೋಕ್ಷ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು. ಡಿ.16ರಂದು ಬೆಳಗ್ಗೆ 10 ರಿಂದ ವಿದ್ವಾನ್ ಕೃಷ್ಣರಾಜ ನಂದಳಿಕೆ ಇವರ ಶಿಷ್ಯರಿಂದ ಶಾಸೀಯ ಸಂಗೀತ ಬಳಿಕ ಮದ್ಯಾಹ್ನ 2 ರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಮಾಧ್ಯಮ ಮಿತ್ರ ವೃಂದ ಕಲಾವಿದರಿಂದ ‘ಶಕ್ರಾರಿ ಕಾಳಗ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸಂಜೆ 4 ರಿಂದ ಬಾಲ ಯಕ್ಷಕೂಟ ಹಳೆ ವಿದ್ಯಾರ್ಥಿಗಳಿಂದ ‘ಯೋಗಿನಿ ಕಲ್ಯಾಣ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ವಿವರಿಸಿದರು.

ಸಂಜೆ 6 ಗಂಟೆಯಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಶ್ರೀಪತಿ ಭಟ್ ಅಲಂಗಾರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದವರು ಹೇಳಿದರು.
ಸಮಾರಂಭದ ಕೊನೆಯ ದಿನ ಬಾಲಯಕ್ಷಕೂಟ ದಶಮಾನೋತ್ಸವ ಸಮ್ಮಾನ ಗೌರವ ಪುರಸ್ಕಾರವನ್ನು ಕೆ. ಗೋವಿಂದ ಭಟ್, ಕೆ.ಎಲ್. ಕುಂಡಂತಾಯ, ಉಜಿರೆ ಅಶೋಕ್ ಭಟ್, ದಯಾನಂದ ಕೋಡಿಕಲ್ ಅವರಿಗೆ ಸಲ್ಲಿಸಲಾಗುವುದು. ಇದೇ ವೇಳೆ ಕೃಷ್ಣರಾಜ ನಂದಳಿಕೆ ಮತ್ತು ಗಂಗಾಧರ ಶೆಟ್ಟಿಗಾರ್ ಇವರಿಗೆ ಗೌರವ ಸಮ್ಮಾನ ನಡೆಯಲಿದೆ. ಕದ್ರಿ ವಿಷ್ಣು ಅವರ ಸಂಸ್ಮರಣೆ ನಡೆದ ಬಳಿಕ, ಸಂಜೆ 7.30 ರಿಂದ ಪ್ರಸಿದ್ಧ ಕಲಾವಿದರಿಂದ ‘ಮೈರಾವಣ ಕಾಳಗ’ ಎಂಬ ಯಕ್ಷಗಾನ ಪ್ರದರ್ಶನವಾಗಲಿದೆ ಎಂದು ರಾಮಚಂದ್ರ ಭಟ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಸಲಹೆಗಾರ ಜಿತೇಂದ್ರ ಕುಂದೇಶ್ವರ, ಅಧ್ಯಕ್ಷ ಕೆ. ಕೃಷ್ಣ ಭಟ್, ಉಪಾಧ್ಯಕ್ಷ ಆರ್.ಕೆ. ರಾವ್, ಕೋಶಾಧಿಕಾರಿ ಕೃಷ್ಣರಾಜ ನಂದಳಿಕೆ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News