ರೈತರಂತೆ ಹೊಟೇಲಿಗರೂ ಅನ್ನದಾತರು: ಪೇಜಾವರ ಶ್ರೀ

Update: 2018-12-11 16:32 GMT

ಉಡುಪಿ, ಡಿ.11: ಹೊಲದಲ್ಲಿ ದುಡಿಯುವ ರೈತರಂತೆ, ಹೊಟೇಲಿಗರೂ ಅನ್ನದಾತರು. ರೈತರು ಧಾನ್ಯಗಳ ಉತ್ಪಾದಕರಾದರೆ, ಹೊಟೇಲ್‌ನವರು ಅವುಗಳ ವಿತರಕರಾಗಿದ್ದಾರೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ಹೇಳಿದ್ದಾರೆ.

ಕರ್ನಾಟಕ ಪ್ರದೇಶ ಹೊಟೇಲು ಮತ್ತು ಉಪಾಹಾರ ಮಂದಿರಗಳ ಸಂಘ ಬೆಂಗಳೂರು ಹಾಗೂ ಉಡುಪಿ ಜಿಲ್ಲಾ ಹೊಟೇಲ್ ಮಾಲಕರ ಸಂಘದ ಸಹಯೋಗದಲ್ಲಿ ಪುರಭವನದಲ್ಲಿ ಮಂಗಳವಾರ ನಡೆದ ರಾಜ್ಯ ಮಟ್ಟದ ಆತಿಥ್ಯ ರತ್ನ ಮತ್ತು ಉದ್ಯಮರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶೀರ್ವಚ ನೀಡಿ ಅವರು ಮಾತನಾಡುತಿದ್ದರು.

ಹಿಂದೆಲ್ಲಾ ಧರ್ಮಶಾಲೆಗಳಿದ್ದವು. ಮನೆ ಮನೆಗಳಲ್ಲೂ ಅತಿಥಿ ಸತ್ಕಾರ ನಡೆಯುತ್ತಿದ್ದವು. ಆದರೆ ಈಗ ಹೊಟೇಲುಗಳಿಲ್ಲದೆ ನಗರಗಳ ವ್ಯವಹಾರ ನಡೆಯುವುದೇ ಅಸಾಧ್ಯ ಎಂಬಂತಾಗಿದೆ. ಹೀಗಾಗಿ ಇವರಿಗೆ ಸರಕಾರದ ಸಹಕಾರವೂ ಸಿಗಬೇಕಾಗಿದೆ ಎಂದರು.\

ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಎಂ.ಎಸ್.ಮಹಾಬಲೇಶ್ವರ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಹೊಟೇಲಿಗರು ನೀಡುತ್ತಿರುವ ಸೇವೆಯನ್ನು ಶ್ಲಾಸಿದರು. ಮಣಿಪಾಲ ಮಾಹೆಯ ಪ್ರೊ ಚಾನ್ಸಲರ್ ಡಾ. ಎಚ್.ಎಸ್.ಬಲ್ಲಾಳ್, ಮಾಜಿ ಸಚಿವರಾದ ಕೆ.ಜಯಪ್ರಕಾಶ ಹೆಗ್ಡೆ, ಪ್ರಮೋದ್ ಮಧ್ವರಾಜ್ ಉಪಸ್ಥಿತರಿದ್ದರು. ಬೆಂಗಳೂರು ಸಂಘದ ಅಧ್ಯಕ್ಷ ಬೀಜಾಡಿ ಚಂದ್ರಶೇಖ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು.

ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್.ಉಪೇಂದ್ರ ಶೆಟ್ಟಿ, ಉದ್ಯಮಿ ಪುರುಷೋತ್ತಮ ಶೆಟ್ಟಿ, ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಸಿಂಡಿಕೇಟ್ ಬ್ಯಾಂಕ್ ಮಹಾಪ್ರಬಂಧಕ ಭಾಸ್ಕರ ಹಂದೆ, ಕೆಪಿಎಚ್‌ಆರ್‌ಎ ಗೌರವಾಧ್ಯಕ್ಷ ಪ್ರಕಾಶ ಶೆಟ್ಟಿ, ಉಪಾಧ್ಯಕ್ಷ ಪಿ.ಸುರೇಶ ಶೆಟ್ಟಿ, ಪಿ.ಸಿ.ರಾವ್, ಉಡುಪಿ ಜಿಲ್ಲಾ ಹೊಟೇಲ್ ಮಾಲಕರ ಸಂಘದ ಗೌರವ ಕಾರ್ಯದರ್ಶಿ ಕೆ.ನಾಗೇಶ್ ಟ್, ಪ್ರಧಾನ ಸಂಚಾಲಕ, ವಿಭಾಗೀಯ ಕಾರ್ಯದರ್ಶಿ ಎಂ.ವಿಟ್ಠಲ್ ಪೈ, ಜಿಲ್ಲಾ ಖಜಾಂಚಿ ಅಚ್ಯುತ ಹೊಳ್ಳ, ಸಹಕಾರ್ಯದರ್ಶಿ ರಾಜೇಶ ಸಾಮಗ ಉಪಸ್ಥಿತರಿದ್ದರು.

ಜಿಲ್ಲಾ ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿ ಕೆಪಿಎಚ್‌ಆರ್‌ಎ ಗೌ. ಕಾರ್ಯದರ್ಶಿ ಮಧುಕರ ಎಂ. ಶೆಟ್ಟಿ ಪ್ರಸ್ತಾವನೆ ಗೈದರು. ರಾಜೇಂದ್ರ ಟ್ ಕಾರ್ಯಕ್ರಮ ನಿರ್ವಹಿಸಿದರು. ಹೊಟೇಲ್ ಉದ್ಯಮದಲ್ಲಿ ಅನೇಕ ವರ್ಷಗಳಿಂದ ತೊಡಗಿಸಿಕೊಂಡ ನಾಡಿನ 9 ಮಂದಿ ಹಿರಿಯ ಹೊಟೇಲ್ ಉದ್ಯಮಿಗಳನ್ನು ಆತಿಥ್ಯ ರತ್ನ ಪ್ರಶಸ್ತಿ ನೀಡಿ, ಮೂವರನ್ನು ಉದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹೊಟೇಲ್‌ಗಳ ನಾಲ್ವರು ನೌಕರರಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News