ಫ್ರಾನ್ಸ್: ‘ಹಳದಿ ಬನಿಯನ್’ ಪ್ರತಿಭಟನೆಗಳ ಪರಿಣಾಮ

Update: 2018-12-11 17:19 GMT

ಫ್ರಾನ್ಸ್, ಡಿ. 11: ಫ್ರಾನ್ಸ್‌ನ ನಗರಗಳಲ್ಲಿ ನಡೆಯುತ್ತಿರುವ ‘ಹಳದಿ ಬನಿಯನ್’ ಪ್ರತಿಭಟನೆಗಳನ್ನು ತಡೆಯುವ ಸಲುವಾಗಿ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಸೋಮವಾರ ಹಲವು ಆರ್ಥಿಕ ಉಪಕ್ರಮಗಳನ್ನು ಘೋಷಿಸಿದ್ದಾರೆ.

ಅಧ್ಯಕ್ಷರ ಕಚೇರಿ ‘ಎಲೈಸೀ ಪ್ಯಾಲೇಸ್’ನಿಂದ ದೇಶವನ್ನುದ್ದೇಶಿಸಿ ಟಿವಿಯಲ್ಲಿ ಮಾಡಿದ 15 ನಿಮಿಷಗಳ ಭಾಷಣದಲ್ಲಿ, ‘‘ಈ ಬಿಕ್ಕಟ್ಟಿನಲ್ಲಿ ನನ್ನ ಪಾಲಿನ ಜವಾಬ್ದಾರಿಯನ್ನು ನಾನು ಸ್ವೀಕರಿಸುತ್ತೇನೆ’’ ಎಂದು ಮ್ಯಾಕ್ರೋನ್ ಹೇಳಿದರು.

ತನ್ನ ನಾಯಕತ್ವದ ಕುರಿತ ಟೀಕೆಗೆ ಹಿಂದೆಂದಿಗಿಂತಲೂ ಹೆಚ್ಚಿನ ವಿನೀತ ಭಾವದಿಂದ ಪ್ರತಿಕ್ರಿಯಿಸಿದ ಅವರು, ‘‘ನನ್ನ ಹೇಳಿಕೆಗಳ ಮೂಲಕ ನಾನು ನಿಮ್ಮಲ್ಲಿ ಕೆಲವರ ಮನಸ್ಸಿಗೆ ಘಾಸಿ ಮಾಡಿದ್ದೇನೆ ಎನ್ನುವುದು ನನಗೆ ಗೊತ್ತು’’ ಎಂದು ಹೇಳಿದರು.

ಆದಾಗ್ಯೂ, ಹೆಚ್ಚಾಗಿ ಸಣ್ಣ ಪಟ್ಟಣಗಳು ಅಥವಾ ಗ್ರಾಮೀಣ ಫ್ರಾನ್ಸ್‌ನ ಕಡಿಮೆ ವರಮಾನದ ಜನರು ನಡೆಸುತ್ತಿರುವ ಪ್ರತಿಭಟನೆಗಳು, ದೀರ್ಘಾವಧಿ ಸಮಸ್ಯೆಗಳ ಫಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಅವರು ಹಲವಾರು ಆರ್ಥಿಕ ಉಪಕ್ರಮಗಳನ್ನು ಘೋಷಿಸಿದರು. ಮುಂದಿನ ವರ್ಷದಿಂದ ಕನಿಷ್ಠ ವೇತನದಲ್ಲಿ ತಿಂಗಳಿಗೆ 100 ಯುರೋ (ಸುಮಾರು 8,132 ರೂಪಾಯಿ) ಏರಿಕೆ ಮಾಡುವುದು, ಈ ಪೈಕಿ ಪ್ರಮುಖ ಉಪಕ್ರಮವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News