ಮಧ್ರಪದೇಶ ಸರಕಾರ ರಚನೆಯ ಚಾವಿ ಸಣ್ಣಪಕ್ಷಗಳು, ಪಕ್ಷೇತರರ ಕೈಗಳಲ್ಲಿ?

Update: 2018-12-11 18:14 GMT

ಭೋಪಾಲ,ಡಿ.11: 230 ಸದಸ್ಯಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಸರಕಾರ ರಚನೆಗೆ ಅಗತ್ಯವಾಗಿರುವ 116 ಸ್ಥಾನಗಳ ಸರಳ ಬಹುಮತ ಕಾಂಗ್ರೆಸ್ ಮತ್ತು ಬಿಜೆಪಿ ಪಾಲಿಗೆ ಮರೀಚಿಕೆಯಾಗುವ ಲಕ್ಷಣಗಳು ಕಂಡುಬಂದಿದ್ದು, ರಾಜ್ಯದಲ್ಲಿ ಯಾರು ಮುಂದಿನ ಸರಕಾರವನ್ನು ರಚಿಸುತ್ತಾರೆ ಎನ್ನುವುದನ್ನು ನಿರ್ಧರಿಸುವುದರಲ್ಲಿ ಸಣ್ಣಪಕ್ಷಗಳು ಮತ್ತು ಪಕ್ಷೇತರರು ನಿರ್ಣಾಯಕ ಪಾತ್ರ ವಹಿಸಬಹುದು.

2013ರ ಚುನಾವಣೆಯಲ್ಲಿ ಬಿಜೆಪಿ 165 ಸ್ಥಾನಗಳನ್ನು ಗಳಿಸುವ ಮೂಲಕ ವಿಧಾನಸಭೆಯಲ್ಲಿ ಸುಭದ್ರ ಸ್ಥಿತಿಯಲ್ಲಿತ್ತು. ಕಾಂಗ್ರೆಸ್‌ಗೆ ಕೇವಲ 58 ಸ್ಥಾನಗಳು ಲಭಿಸಿದ್ದವು.

ಮಂಗಳವಾರ ರಾತ್ರಿ ಚುನಾವಣಾ ಆಯೋಗದ ಅಧಿಕೃತ ಘೋಷಣೆಗಾಗಿ ಕಾಯುತ್ತಿರುವಾಗ ಕಾಂಗ್ರೆಸ್ 114 ಮತ್ತು ಬಿಜೆಪಿ 106 ಸ್ಥಾನಗಳಲ್ಲಿ ಗೆಲುವು ಮತ್ತು ಮುನ್ನಡೆ ಸಾಧಿಸಿದ್ದರೆ, ಮೂರು ಕ್ಷೇತ್ರಗಳಲ್ಲಿ ಬಿಎಸ್‌ಪಿ ಮತ್ತು ಏಳು ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಮತ್ತು ಮುನ್ನಡೆ ಸಾಧಿದ್ದರು.

 ತ್ರಿಶಂಕು ವಿಧಾನಸಭೆ ರೂಪುಗೊಂಡರೆ ಈ ಸಣ್ಣಪಕ್ಷಗಳು ಮತ್ತು ಪಕ್ಷೇತರರು ಸರಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News