ಜ.20ರಂದು ರಾಷ್ಟ್ರಮಟ್ಟದ ಮ್ಯಾರಥಾನ್

Update: 2018-12-12 14:45 GMT

ಬ್ರಹ್ಮಾವರ, ಡಿ.12: ಆರೋಗ್ಯದ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಎಕ್ತಾ ಇವೆಂಟ್ ಮ್ಯಾನೇಜ್ಮೆಂಟ್ ಹಾಗೂ ಕಲ್ಯಾಣಿ ಸ್ಪೋರ್ಟ್ಸ್‌ನ ಜಂಟಿ ಆಶ್ರಯದಲ್ಲಿ ರಾಷ್ಟ್ರಮಟ್ಟದ ಬಿ ಹೆಲ್ತಿ ಎಂಬ ಮ್ಯಾರಥಾನ್ ಓಟವನ್ನು ಜ.20 ರಂದು ಬ್ರಹ್ಮಾವರದಲ್ಲಿ ಆಯೋಜಿಸಲಾಗಿದೆ.

ಬ್ರಹ್ಮಾವರ ಮಹೇಶ್ ಆಸ್ಪತ್ರೆ ಎದುರಿನ ವ್ಯಾಲೆಂಟೈನ್ ಮೈದಾನದಿಂದ ಮ್ಯಾರಥಾನ್ ಆರಂಭಗೊಳ್ಳಲಿದ್ದು, ಪುರುಷರು(10ಕಿ.ಮೀ.) ಹಾಗೂ ಮಹಿಳೆ ಯರು(6 ಕಿ.ಮೀ.) ಎಂಬ ಎರಡು ವಿಭಾಗಗಳಲ್ಲಿ ಈ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಸುಮಾರು 3000ಕ್ಕಿಂತ ಹೆಚ್ಚು ಓಟಗಾರರು ಭಾಗವಹಿಸುವ ನಿರೀಕ್ಷೆ ಇದೆ. ಪ್ರತಿ ವಿಭಾಗದಲ್ಲಿ 6 ವಿಜೇತರಿಗೆ ಟ್ರೋಫಿ, ಪದಕ, ಪ್ರಮಾಣ ಪತ್ರದ ಜೊತೆಗೆ ನಗದು ಬಹುಮಾನವನ್ನು ನೀಡಲಾಗುವುದು. ಭಾಗವಹಿಸಲು ಇಚ್ಛಿಸು ವವರು ಜ.5ರೊಳಗೆ ಹೆಸರು(ದೂ.ಸಂ.: 0820-2562385, ಮೊ-95587 32221) ನೊಂದಾಯಿಸಬೇಕಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಖಲೀಲ್ ಕೆರಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News