ಅಠವಾಲೆ ಮೇಲೆ ಹಲ್ಲೆ: ಉನ್ನತ ಮಟ್ಟದ ತನಿಖೆಗೆ ಆಗ್ರಹ

Update: 2018-12-12 16:35 GMT

ಉಡುಪಿ, ಡಿ.12: ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮ್‌ದಾಸ್ ಅಠವಾಲೆ ಮೇಲೆ ಕೋಮುವಾದಿ ಶಕ್ತಿಗಳು ನಡೆಸಿರುವ ಹಲ್ಲೆ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರ ಗಿಸುವಂತೆ ಆಗ್ರಹಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ಡಿ.12ರಂದು ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮಹಾರಾಷ್ಟ್ರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.

 ಸಮಾನತೆಯ ಹರಿಕಾರ ರಾಮ್‌ದಾಸ್ ಅಠವಾಳೆ ಕಾರ್ಯವೈಖರಿಯನ್ನು ಸಹಿಸದ ಕೋಮುವಾದಿ ದುಷ್ಟ ಶಕ್ತಿಗಳು ಸೇರಿ ಪ್ರವೀಣ್ ಗೋಸಾವಿ ಎಂಬಾತನ ಮೂಲಕ ಇಂತಹ ಹೇಯ್ಯ ಕೃತ್ಯವನ್ನು ಮಾಡಿಸಿದ್ದಾರೆ. ಆದುದರಿಂದ ಅಠವಾಳೆ ಮೇಲೆ ಹಲ್ಲೆ ನಡೆಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದರ ಹಿಂದಿನ ದುಷ್ಟ ಶಕ್ತಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಆರ್‌ಪಿಐಯ ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಡೂರು, ಸಂಘಟನಾ ಕಾರ್ಯದರ್ಶಿ ಸುಧಾಕರ ಸೂರ್ಗೋಳಿ, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಶಿರಿಯಾರ, ಪದಾ ಧಿಕಾರಿಗಳಾದ ಮೋಹನ್ ಬಿಲ್ಲಾಡಿ, ಲಕ್ಷ್ಮೀ, ರಾಮ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News