ಸಂತ ಅಲೋಶಿಯಸ್ ಕಾಲೇಜಿನ 139ನೆ ವಾರ್ಷಿಕ ಕ್ರೀಡಾಕೂಟ

Update: 2018-12-12 17:03 GMT

ಮಂಗಳೂರು, ಡಿ.12: ಸಂತ ಅಲೋಶಿಯಸ್ ಕಾಲೇಜಿನ 139ನೆ ವಾರ್ಷಿಕ ಕ್ರೀಡಾಕೂಟ ಇಂದು ಕಾಲೇಜಿನ ಶತಮಾನೆತ್ಸವ ಮೈದಾನದಲ್ಲಿ ನಡೆಯಿತು.

ಮಂಗಳೂರು ವಿವಯ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿಸೋಜಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕ್ರೀಡಾಕೂಟ ಉದ್ಘಾಟಿಸಿದರು.

ಮಾಜಿ ಮಿಸ್ಟರ್ ವರ್ಲ್ಡ್ ಖ್ಯಾತಿಯ ರೇಮಂಡ್ ಡಿಸೋಜಾ ಅತಿಥಿಯಾಗಿ ಭಾಗವಹಿಸಿದ್ದರು. ರೆಕ್ಟರ್ ರೆ.ಫಾ. ಡೈನೇಶಿಯಸ್ ವಾಝ್ ಅಧ್ಯಕ್ಷತೆ ವಹಿಸಿದ್ದರು.ಅವರು ಮಾತನಾಡಿ, ಸಂತ ಅಲೋಶಿಯಸ್ ಕಾಲೇಜು ತನ್ನ ವಿದ್ಯಾರ್ಥಿಗಳ ಬೆಳವಣಿಗೆಯ ನಿಟ್ಟಿನಲ್ಲಿ ಹೊಸ ಕ್ರೀಡಾ ನೀತಿಯನ್ನು ಜಾರಿಗೆ ತಂದಿರುವುದಾಗಿ ಹೇಳಿದರು.

ಈ ವಾರ್ಷಿಕ ಕ್ರೀಡಾಕೂಟದಲ್ಲಿ ನವೀಕರಿಸಲಾದ ಜಿಮ್, ಬ್ಯಾಡ್‌ಮಿಂಟನ್ ಕೋರ್ಟ್, ಬಾಸ್ಕೆಟ್‌ಬಾಲ್ ಕೋರ್ಟ್ ಮತ್ತು ವರ್ಮಿಬಿನ್ ಘಟಕಗಳ ಉದ್ಘಾಟನೆಯನ್ನು ನೆರವೇರಿಸಲಾಯಿತು. ಕುಲಸಚಿವ ಡಾ.ಎ.ಎಂ. ನರಹರಿ, ಹಣಕಾಸು ಅಧಿಕಾರಿ ರೆ.ಪಾ. ಮೆಲ್ವಿನ್ ಲೋಬೋ, ಡೀನ್‌ಗಳು, ವಿಭಾಗ ಮುಖ್ಯಸ್ಥರು, ತರಗತಿ ಮಾರ್ಗದರ್ಶಕರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಲು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ಪ್ರಾಂಶುಪಾಲ ರೆ.ಡಾ. ಪ್ರವೀಣ್ ಮಾರ್ಟಿಸ್ ಸ್ವಾಗತಿಸಿದರು. ಕ್ರೀಡಾಕೂಟದ ಸಂಯೋಜಕಿ ಪ್ರೆಸಿಲ್ಲಾ ಡಿಸಿಲ್ವಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News