ಅಲ್ ಫುರ್ಖಾನ್ ಇಸ್ಲಾಮೀ ವಿಧ್ಯಾಸಂಸ್ಥೆ: ವಾರ್ಷಿಕ ಕ್ರೀಡಾಕೂಟ

Update: 2018-12-12 18:29 GMT

ಮೂಡಬಿದಿರೆ, ಡಿ. 12 : ಅಲ್ ಫುರ್ಖಾನ್ ಇಸ್ಲಾಮೀ ವಿಧ್ಯಾ ಸಂಸ್ಥೆಯ ವಿವಿಧ ವಿಭಾಗಗಳ ವಾರ್ಷಿಕ ಕ್ರೀಡಾ ಕೂಟವು ಸಂಸ್ಥೆಯ ಕ್ರೀಡಾಂಗಣ ಹಾಗೂ ಸ್ವರಾಜ್ ಮೈದಾನ ಮೂಡಬಿದಿರೆಯಲ್ಲಿ ಡಿ. 11, 12 ರಂದು  ನಡೆಯಿತು.

ಅಲ್ ಫುರ್ಖಾನ್ ವಿದ್ಯಾರ್ಥಿಗಳ ವಿಭಾಗದ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾದ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಇದರ ಮ್ಯಾನೇಜಿಂಗ್ ಟ್ರಸ್ಟಿ  ವಿವೇಕ್ ಆಳ್ವ ಅವರು ವಿದ್ಯಾರ್ಥಿಗಳ ಶಿಸ್ತನ್ನು ಪ್ರಶಂಸಿಸಿ ಮಾತನಾಡಿ, ಕ್ರೀಡಾಕೂಟವು ಮನೊರಂಜನೆಯೊಂದಿಗೆ ಆರೋಗ್ಯ ದಾಯಕವೂ ಆಗಿದೆ ಎನ್ನುತ್ತಾ ಕ್ರೀಡೆಯ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ವೈಸ್ ಚೆಯರ್ ಮ್ಯಾನ್ ನಜ್‍ಮುದ್ದೀನ್ ಅಸ್ಸಾದಿ, ಅತಿಥಿಗಳಾಗಿ ಸಂಸ್ಥೆಯ ಖಜಾಂಜಿ ಮುಹಮ್ಮದ್ ಅಶ್ಫಾಕ್, ಆಡಳಿತಾಧಿಕಾರಿ ಮುಹಮ್ಮದ್ ಶಹಾಂ, ಅರಬಿಕ್ ವಿಭಾಗದ ಮುಖ್ಯಸ್ಥ ಅಬ್ದುಲ್ ಮುಸವ್ವಿರ್ ಉಮ್ರಿ ಮದನಿ, ತಾಂತ್ರಿಕ ಆಡಳಿತಾಧಿಕಾರಿ ನೂರ್ ಮುಹಮ್ಮದ್ ಉಪಸ್ಥಿತರಿದ್ದರು. ವಿಧ್ಯಾರ್ಥಿಗಳಾದ ಝುವೇರ್ ಅಹ್ಮದ್ ಸ್ವಾಗತಿಸಿದರು. ಮುಸಾಬ್ ಬಿನ್ ಅಶ್ಫಾಕ್ ವಂದಿಸಿದರು. ದಾವೂದ್ ಬಶೀರ್ ಕಾರ್ಯಕ್ರಮವನ್ನು ನಿರೂಪಿಸಿದರು.

ಭಾರತ ತಂಡವನ್ನು ಪ್ರತಿನಿಧಿಸಿದ ಅಂತಾರಾಷ್ಟ್ರೀಯ ಕ್ರೀಡಾ ಪಟು ಜೋಯಲಿನ್ ಮುರಾಲ್ ಲೋಬೊ ವಿದ್ಯಾರ್ಥಿನಿಯರ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕಿ ಮುಮ್ತಾಝ್ ಬಿಂತ್ ಮೊಯ್ದಿನ್ ಕುಂಞಿ, ಅತಿಥಿಗಳಾಗಿ ಪ್ರಾಂಶುಪಾಲೆಯರುಗಳಾದ ನಝ್ರಾನ ಹಾಗೂ ಮೊಹಿಮ ಖಾಲಿದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News