ಉಪ್ಪಳ್ಳಿ: ಟೀಮ್ ಹಸನೈನ್ ತರಬೇತಿ ಶಿಬಿರ 'ಖಿಯಾದ-2018'

Update: 2018-12-13 07:52 GMT

ಚಿಕ್ಜಮಗಳೂರು, ಡಿ.13: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ಭವಿಷ್ಯದ ಭರವಸೆಯ ತಂಡ 'ಟೀಮ್ ಹಸನೈನ್'ನ ಬೆಂಗಳೂರು, ಕೊಡಗು, ಚಿಕ್ಕಮಗಳೂರು, ಹಾಸನ, ಮೈಸೂರು ಹಾಗೂ ಶಿಮೊಗ್ಗ ಜಿಲ್ಲೆಗಳ ಟೀಮ್ ಹಸನೈನ್ ಟ್ರೈನಿಂಗ್ ಕ್ಯಾಂಪ್ 'ಖಿಯಾದ-2018' ಉಪ್ಪಳ್ಳಿಯ ಶಾದುಲಿ ಜುಮಾ ಮಸ್ಜಿದ್ ಮದ್ರಸ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಎಸ್.ವೈ.ಎಸ್. ರಾಜ್ಯ ಕೋಶಾಧಿಕಾರಿ ಯೂಸುಫ್ ಹಾಜಿ ಉಪ್ಪಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ಸದಸ್ಯ ಉಸ್ಮಾನ್ ಹಂಡುಗುಳಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಕಾರ್ಯದರ್ಶಿ ಮೌಲಾನಾ ಸುಫ್ಯಾನ್ ಸಖಾಫಿ ತರಗತಿ ನಡೆಸಿದರು. ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ಸದಸ್ಯ ಹುಸೈನ್ ಸಅದಿ ಹೊಸ್ಮಾರ್ ಮುನ್ನುಡಿ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯ ಶಾಹಿನ್ ಚಿಕ್ಕಮಗಳೂರು, ಜಿಲ್ಲಾ ನಾಯಕರಾದ ಸಫ್ವಾನ್ ಸಖಾಫಿ ,ಅಝೀಝ್ ಮಾಗುಂಡಿ, ಆಬಿದ್ ಸಖಾಫಿ ಮಾಗುಂಡಿ, ಎಸ್ಸೆಸ್ಸೆಫ್ ನಾಯಕರಾದ ಖಲಂದರ್ ಸಖಾಫಿ ಚಿಕ್ಕಮಗಳೂರು, ಶಾಫಿ ಸಅದಿ ಸೋಮಾರಪೇಟೆ, ಸಾದಾತ್ ಶಿವಮೊಗ್ಗ ಹಾಗೂ ಇನ್ನಿತರ ಉಲಮಾ-ಉಮರಾ ನಾಯಕರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ಟೀಮ್ ಹಸನೈನ್ ರಾಜ್ಯ ಉಸ್ತುವಾರಿ ಇಸ್ಮಾಯೀಲ್ ಮಾಸ್ಟರ್ ಮೊಂಟೆಪದವು ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News