×
Ad

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ಗೆ ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ

Update: 2018-12-13 18:33 IST

ಉಡುಪಿ, ಡಿ.13: ಉಡುಪಿ ಜಿಲ್ಲಾ ನೆಹರೂ ಯುವ ಕೇಂದ್ರದ ವತಿಯಿಂದ ಕಾರ್ಕಳ ತಾಲೂಕಿನ ನಂದಳಿಕೆ-ಅಬ್ಬನಡ್ಕ ಶ್ರೀದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಂಸ್ಥೆಗೆ ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಮತ್ತು 25 ಸಾವಿರ ರೂ. ನಗದು ಹಾಗೂ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಯಿತು.

ಉಡುಪಿಯ ಪ್ರಗತಿ ಸೌಧದಲ್ಲಿ ಇತ್ತೀಚೆಗೆ ಜರಗಿದ ಕರ್ನಾಟಕ ಮತ್ತು ಉತ್ತರಾಖಂಡ ರಾಜ್ಯದ ಅಂತರ್ ರಾಜ್ಯ ಯುವ ವಿನಿಮಯ ಕಾರ್ಯ ಕ್ರಮದಲ್ಲಿ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಈ ಸಂಧರ್ಭದಲ್ಲಿ ಬೆಂಗಳೂರು ನೆಹರೂ ಯುವ ಕೇಂದ್ರ ಸಂಘಟನೆಯ ರಾಜ್ಯ ನಿರ್ದೇಶಕ ಸುನಿಲ್ ಮಲ್ಲಿಕ್, ಉಡುಪಿ ನೆಹರೂ ಯುವ ಕೇಂದ್ರ ದ ಸಮಾನ್ವಯಾಧಿಕಾರಿ ವಿಲ್ಪ್ರೆಡ್ ಡಿಸೋಜ, ಜಿಪಂ ಅಧಿಕಾರಿ ನಾಗೇಶ್ ರಾಯ್ಕರ್, ಕಾರ್ಪೋರೇಶನ್ ಬ್ಯಾಂಕಿನ ಉಡುಪಿ ವಲಯದ ಉಪ ಮಹಾ ಪ್ರಬಂಧಕಿ ಡೇಲಿಯಾ ಡಯಾಸ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳಾದ ಅಶೋಕ್ ಹಾಗೂ ಮಮತಾ, ಇನ್ನಾ ಗ್ರಾಪಂ ಸದಸ್ಯ ದೀಪಕ್ ಕೋಟ್ಯಾನ್, ಉದ್ಯಾವರ ಗ್ರಾಪಂ ಸದಸ್ಯ ಮಿಥೇಶ್ ಪೂಜಾರಿ, ಕ್ಲಬ್‌ನ ಅಧ್ಯಕ್ಷ ರಾಜೇಶ್ ಕೋಟ್ಯಾನ್ ನಂದಳಿಕೆ, ಸಂಚಾಲಕ ಅಬ್ಬನಡ್ಕ ಸಂದೀಪ್ ಪೂಜಾರಿ, ಸ್ಥಾಪಕಾಧ್ಯಕ್ಷ ವಿಠಲ ಮೂಲ್ಯ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವ ಸಲಹೆಗಾರ ರವಿರಾಜ್ ಶೆಟ್ಟಿ, ಪೂರ್ವಾ ಧ್ಯಕ್ಷ ಆನಂದ ಪೂಜಾರಿ, ದಿನೇಶ್ ಪೂಜಾರಿ ಬಿರೋಟ್ಟು, ಸುರೇಶ್ ಪೂಜಾರಿ ಕಾಸ್ರಬೈಲು, ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಕೋಶಾಧಿಕಾರಿ ಹರಿಪ್ರಸಾದ್ ಆಚಾರ್ಯ ಅಬ್ಬನಡ್ಕ, ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಮಾಜಿ ಕಾರ್ಯದರ್ಶಿ ಅಭಿಜಿತ್ ರಾವ್, ಭಜನಾ ಸಮಿತಿ ಅಧ್ಯಕ್ಷ ಬೋಳ ಮಂಜುನಾಥ ಆಚಾರ್ಯ, ಕಾರ್ಯದರ್ಶಿ ಸುಲೋಚನಾ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News