ಉಡುಪಿ: ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಧರಣಿ

Update: 2018-12-13 14:37 GMT

ಉಡುಪಿ, ಡಿ.13: ರಾಷ್ಟ್ರೀಕೃತ ಬ್ಯಾಂಕ್‌ಗಳಾದ ಬ್ಯಾಂಕ್ ಆಫ್ ಬರೋಡ, ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್‌ಗಳ ವಿಲೀನ ಬಗ್ಗೆ ಕೇಂದ್ರ ಸರಕಾರ ಕೈಗೊಂಡ ನಿರ್ಧಾರವನ್ನು ವಿರೋಧಿಸಿ ಬ್ಯಾಂಕ್ ಸಂಘಟನೆಗಳ ಒಕ್ಕೂಟದ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಬ್ಯಾಂಕ್ ಅಧಿಕಾರಿಗಳು ಹಾಗೂ ನೌಕರರು ಗುರುವಾರ ಉಡುಪಿ ಕಾರ್ಪೊರೇಶನ್ ಬ್ಯಾಂಕ್ ವಲಯ ಕಚೇರಿ ಎದುರು ಧರಣಿ ನಡೆಸಿದರು.

ಕೇಂದ್ರ ಸರಕಾರದ ಏಕಪಕ್ಷೀಯ ನಿರ್ಧಾರ ಖಂಡನೀಯ. ಈ ಮೊದಲು ಸರಕಾರ ಕೈಗೊಂಡ ಸ್ಟೇಟ್ ಬ್ಯಾಂಕ್‌ನ ಸಹವರ್ತಿ ಬ್ಯಾಂಕ್‌ಗಳ ವಿಲೀನವು ದೇಶದಲ್ಲಿ ಬ್ಯಾಂಕ್‌ಗಳ ವಿಲೀನದಿಂದ ಏನನ್ನೂ ಸಾಧಿಸಲಾಗದು ಎಂಬುದನ್ನು ಸಾಬೀತು ಪಡಿಸಿದೆ. ಆದರೂ ಕೂಡ ಕೇಂದ್ರ ಸರಕಾರದ ಈ ನಡೆ ದುರದೃಷ್ಟಕರ. ನನೆಗುದಿಯಲ್ಲಿರುವ ವೇತನ ಪರಿಷ್ಕರಣೆ ಮತ್ತು ಎಲ್ಲರಿಗೂ ಸಮಾನ ಪಿಂಚಣಿ ಸಿಗಲೇಬೇಕೆಂದು ಧರಣಿನಿರತರು ಒತಾ್ತಯಿಸಿದರು.
ಧರಣಿಯನ್ನುದ್ದೇಶಿಸಿ ವಿಜಯಾ ಬ್ಯಾಂಕಿನ ಶಿವಪ್ರಸಾದ್, ಸಿಂಡಿಕೇಟ್ ಬ್ಯಾಂಕಿನ ಶಶಿಧರ್ ಶೆಟ್ಟಿ, ಕರ್ಣಾಟಕ ಬ್ಯಾಂಕಿನ ನಿತ್ಯಾನಂದ, ಕಾರ್ಪೊರೇಶನ್ ಬ್ಯಾಂಕಿನ ಹೇಮಂತ್ ಯು.ಕಾಂತ್ ಮಾತನಾಡಿದರು.

ಈ ಸಂದರ್ಭದಲ್ಲಿ ಕೆನರಾ ಬ್ಯಾಂಕಿನ ವರದರಾಜ, ರಾಕೇಶ್, ಕಾರ್ಪೊ ರೇಶನ್ ಬ್ಯಾಂಕಿನ ರಘುರಾಮ ಕೃಷ್ಣ ಬಲ್ಲಾಳ್, ನಾಗೇಶ್, ಅಶೋಕ್ ಕೋಟ್ಯಾನ್, ಸಿಂಡಿಕೇಟ್ ಬ್ಯಾಂಕಿನ ರವಿ, ವಿಜಯಾ ಬ್ಯಾಂಕಿನ ಬಿ.ಕೆ.ಬಿಲ್ಲವ, ಅಧಿಕಾರಿಗಳ ಸಂಘಟನೆಯ ರವಿಶಂಕರ್, ಜಯಪ್ರಕಾಶ್ ರಾವ್, ನೌಕರರ ಸಂಘಟನೆಯ ರಾಮಮೋಹನ್, ರವೀಂದ್ರ, ಜಯನ್ ಮಲ್ಪೆ ಮೊದಲಾದ ವರು ಉಪಸ್ಥಿತರಿದ್ದರು. ಜಿಲ್ಲಾ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆಯ ಸಂಚಾಲಕ ಹೆರಾಲ್ಡ್ ಡಿಸೋಜ ಸಂಘಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News