‘ಮಿಸ್-ಮಿಸ್ಟರ್ ಮಣಿಪಾಲ-2019’ ಸ್ಪರ್ಧೆ

Update: 2018-12-13 14:50 GMT

ಉಡುಪಿ, ಡಿ.13: ಒನ್ ಸ್ಟೆಪ್ ಕ್ಲೋಸರ್ ಇವೆಟ್ಸ್ ಆ್ಯಂಡ್ ಪ್ರೋಡಕ್ಷನ್ ವತಿಯಿಂದ ಮಿಸ್ಟರ್, ಮಿಸ್, ಮಿಸ್ ಟೀನ್ ಮತ್ತು ಮಿಸ್ಟರ್ ಮಣಿಪಾಲ- 2019 ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಮಿಸ್ಟರ್ ಮಣಿಪಾಲ ವಿಭಾಗದಲ್ಲಿ 19ರಿಂದ 27ವರ್ಷದ ಅವಿವಾಹಿತ ಯುವಕರು, ಮಿಸ್ ಮಣಿಪಾಲ ವಿಭಾಗದಲ್ಲಿ 19ರಿಂದ 28ವರ್ಷದ ಅವಿ ವಾಹಿತ ಯುವತಿಯರು, ಮಿಸ್ ಟೀನ್ ವಿಭಾಗದಲ್ಲಿ 13ರಿಂದ 18ವರ್ಷದ ಬಾಲಕಿಯರು ಹಾಗೂ ಮಿಸ್ಟರ್ ಮಣಿಪಾಲ ವಿಭಾಗದಲ್ಲಿ 18ರಿಂದ 60ವರ್ಷದವರು ಭಾಗವಹಿಸಬಹುದಾಗಿದೆ ಎಂದು ಸಂಘಟಕಿ ಪೃಥ್ವಿ ಗಣೇಶ್ ಕಾಮತ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಇದರ ಆಡಿಷನ್ ಮಣಿಪಾಲದ ರಿಮಿಕ್ಸ್ ಲಾಂಜ್‌ನಲ್ಲಿ ಡಿ.15ರಂದು ನಡೆಯಲಿದೆ. ಮುಂದೆ ಮಂಗಳೂರು, ಉಡುಪಿ, ಕುಂದಾಪುರದಲ್ಲೂ ಮಾಡ ಲಾಗುವುದು. ಈ ಸಂಬಂಧ ವಿಡಿಯೋಗಳನ್ನು ವಾಟ್ಸ್‌ಅಪ್ ಮೂಲಕವೂ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 8105151520, 88844 10414ನ್ನು ಸಂಪರ್ಕಿಸಬಹುದಾಗಿದೆ.

ಸುದ್ದಿಗೋಷ್ಠಿಯಲ್ಲಿ ಸಂಘಟರಾದ ಲೇನಿ, ಎಲ್ಮಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News