ಛಾಯಾಗೆ ಪಿಎಚ್‌ಡಿ ಪದವಿ

Update: 2018-12-13 14:51 GMT

ಬ್ರಹ್ಮಾವರ, ಡಿ.13: ಛಾಯಾ ರವಿ ಗೊಬ್ಬಿನರ್ ಮಂಡಿಸಿದ ‘ಗ್ರೋತ್ ಆ್ಯಂಡ್ ಕ್ಯಾರೆಕ್ಟರೈಸೇಶನ್ ಆಫ್ ಬೈ-ಲೇಯರ್ ಥಿನ್ ಫಿಲ್ಮ್ ಸೋಲಾರ್ ಸೆಲ್ಸ್ ಬೇಸ್ಡ್ ಆನ್ ಮೆಟಲ್ ಆಕ್ಸೈಡ್ಸ್’ ಎಂಬ ವಿಷಯದ ಕುರಿತ ಸಂಶೋಧನಾ ಪ್ರಬಂಧಕ್ಕೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಪಿಎಚ್‌ಡಿ ಪದವಿ ನೀಡಿದೆ.

ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹ ಪ್ರಾಧ್ಯಾಪಕ ಡಾ. ಧನಂಜಯ ಕೇಕುಡ ಅವರ ಮಾರ್ಗದರ್ಶನದಲ್ಲಿ ಇವರು ಈ ಪ್ರಬಂಧವನ್ನು ಮಂಡಿಸಿದ್ದರು. ಇವರು ಹಾರಾಡಿ ಗ್ರಾಮದ ಸೋಮಪ್ಪಕರ್ಕೇರ ಹಾಗೂ ಕುಸುಮ ಕರ್ಕೇರ ದಂಪತಿ ಪುತ್ರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News