ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ: ಅರ್ಜಿ ಆಹ್ವಾನ

Update: 2018-12-13 14:56 GMT

ಮಂಗಳೂರು, ಡಿ.13: ಕರ್ನಾಟಕ ಸರಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ಮೂಲಕ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ ಅನುಷ್ಠಾನಗೊಂಡಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಎಸೆಸೆಲ್ಸಿ ಉತ್ತೀರ್ಣ/ಅನುತ್ತೀರ್ಣ, ಐಟಿಐ ಉತ್ತೀರ್ಣ/ಅನುತ್ತೀರ್ಣ, ವಿವಿಧ ಹಂತಗಳಲ್ಲಿ ತಾಂತ್ರಿಕ/ತಾಂತ್ರಿಕೇತರ ಕಾಲೇಜು ಶಿಕ್ಷಣ ತೊರೆದ ಅಭ್ಯರ್ಥಿಗಳಿಗೆ ಅಕೌಂಟ್ಸ್ ಎಕ್ಸಿಕ್ಯೂಟಿವ್ (ಟ್ಯಾಲಿ ಇಆರ್‌ಪಿ 9.0), ಸಿಸ್ಕೊ ಐ.ಟಿ. ಎಸೆನ್ಸಿಯಲ್ಸ್, ಬೇಸಿಕ್ ವೆಲ್ಡಿಂಗ್, ಟಿಗ್ ವೆಲ್ಡಿಂಗ್, ಮಿಗ್ ವೆಲ್ಡಿಂಗ್, ರೆಫ್ರಿಜರೇಶನ್ ಮತ್ತು ಏರ್ ಕಂಡೀಷನಿಂಗ್ ಕೋರ್ಸ್‌ಗಳಲ್ಲಿ ಉಚಿತ ಉದ್ಯೋಗಾಧಾರಿತ ಅಲ್ಪಾವಧಿ ತರಬೇತಿಯನ್ನು ಮಂಗಳೂರಿನ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ(ಕೆಜಿಟಿಟಿಐ)ಯಲ್ಲಿ ನೀಡಲಾಗುತ್ತಿದೆ.

ತರಬೇತಿ ಪಡೆಯಲು ಬಯಸುವ ಅಭ್ಯರ್ಥಿಗಳು ಮಂಗಳೂರಿನ ಸರಕಾರಿ ಐಟಿಐ ಕದ್ರಿಹಿಲ್ಸ್, ಈ ಸಂಸ್ಥೆಯ ಆವರಣದಲ್ಲಿರುವ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಎರಡನೇ ಮಹಡಿಯಲ್ಲಿರುವ ಕೆಜಿಟಿಟಿಐ ಕಚೇರಿಯಿಂದ ಅರ್ಜಿಯನ್ನು ಪಡೆದು, ಭರ್ತಿಗೊಳಿಸಿದ ಅರ್ಜಿಯನ್ನು ಡಿ.24ರೊಳಗೆ ಹಿಂತಿರುಗಿಸಬೇಕು.

ಹೆಚ್ಚಿನ ಮಾಹಿತಿಗೆ ದೂ.ಸಂ.: 0824- 2211477ನ್ನು ಸಂಪರ್ಕಿಸಬಹುದಾಗಿದೆ ಎಂದು ಮಂಗಳೂರು ಕೆಜಿಟಿಟಿಐ ನಿರ್ದೇಶಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News