ಪಕ್ಷದ ವಿಶ್ವಾಸ ಮತ ಗೆದ್ದ ಬ್ರಿಟನ್ ಪ್ರಧಾನಿ: 117 ಸಂಸದರಿಂದ ವಿರುದ್ಧ ಮತ

Update: 2018-12-13 16:23 GMT

ಲಂಡನ್, ಡಿ. 13: ಬ್ರಿಟನ್ ಪ್ರಧಾನಿ ತೆರೇಸಾ ಮೇ ಬುಧವಾರ ರಾತ್ರಿ ತನ್ನದೇ ಸಂಸದೀಯ ಪಕ್ಷದ ವಿಶ್ವಾಸವನ್ನು 200-117 ಮತಗಳ ಅಂತರದಿಂದ ಗೆದ್ದಿದ್ದಾರೆ. ಆದರೆ, ಅವರ ವಿರುದ್ಧದ ಬಂಡಾಯದ ಪ್ರಮಾಣ ಅವರನ್ನು ರಾಜಕೀಯವಾಗಿ ದುರ್ಬಲಗೊಳಿಸಿದೆ.

ಇದು ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ‘ಬ್ರೆಕ್ಸಿಟ್’ ಒಪ್ಪಂದವನ್ನು ಸಂಸತ್ತು ಅಂಗೀಕರಿಸುವಂತೆ ಮಾಡುವ ಅವರ ಪ್ರಯತ್ನದಲ್ಲಿ ಭಾರೀ ಹಿನ್ನಡೆಯಾಗಿದೆ.

ಕನ್ಸರ್ವೇಟಿವ್ ಪಕ್ಷದ 117 ಸಂಸದರು ತಮ್ಮ ಪ್ರಧಾನಿಯ ಮೇಲೆ ಅವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮತದಾನಕ್ಕೆ ಮುನ್ನ ಪಕ್ಷದ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಸದರನ್ನು ಸಂತೈಸಲು ಯತ್ನಿಸಿದರು. 2022ರಲ್ಲಿ ನಡೆಯಲಿರುವ ಮುಂದಿನ ಚುನಾವಣೆಯಲ್ಲಿ ನಾನು ಪಕ್ಷದ ನಾಯಕತ್ವವನ್ನು ವಹಿಸುವುದಿಲ್ಲ, ಆದರೆ, ಸಂಸತ್ತಿನಲ್ಲಿ ಬ್ರೆಕ್ಸಿಟ್ ಅಂಗೀಕಾರಗೊಳ್ಳುವಂತೆ ನಾನು ನೋಡಿಕೊಳ್ಳಬೇಕಾಗಿದೆ ಎಂದರು.

2019 ಮಾರ್ಚ್ 29ರಂದು ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News