‘ಸೇಫ್ ಮಂಗಳೂರು’ ಕಿರುಚಿತ್ರ ಸ್ಪರ್ಧೆ ಆಯೋಜನೆ

Update: 2018-12-13 16:37 GMT

ಮಂಗಳೂರು, ಡಿ.13: ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ನಗರದ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ‘ಸೇಫ್ ಮಂಗಳೂರು’ ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಪಿಯು ಕಾಲೇಜು, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಈ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಡಿ. 22ರಂದು ಚಿತ್ರ ಸಲ್ಲಿಕೆಗೆ ಕೊನೆ ದಿನಾಂಕವಾಗಿದೆ.

ಕಿರುಚಿತ್ರ ವಿಷಯಗಳು: ರ್ಯಾಗಿಂಗ್, ಡ್ರಗ್ಸ್, ರಸ್ತೆ ಸುರಕ್ಷತೆ, ಸೈಬರ್ ಕ್ರೈಮ್, ಕಿಸೆಕಳ್ಳತನ, ಸರಗಳ್ಳತನ, ದರೋಡೆ, ಮಹಿಳಾ ಸುರಕ್ಷೆ, ಧೂಮಪಾನ, ಅತ್ಯಾಚಾರ, ಬಾಲಕಾರ್ಮಿಕರು, ವರದಕ್ಷಿಣೆ ವಿಷಯಾಧಾರಿತವಾಗಿ ತಯಾರಿಸಬಹುದಾಗಿದೆ. ಕಿರುಚಿತ್ರವು ಸಾರ್ವಜನಿಕರಲ್ಲಿ ಅಪರಾಧ ಚಟುವಟಿಕೆಯ ಬಗ್ಗೆ ಜಾಗೃತಿ ಹಾಗೂ ಅಪರಾಧ ಬಗ್ಗೆ ಮುಂಜಾಗ್ರತೆ ಮೂಡಿಸುವಂತಿರಬೇಕು. ಸ್ಪರ್ಧಿಗಳಿಗೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.

ಕಿರುಚಿತ್ರದ ಸಾಹಿತ್ಯ, ನಿರ್ದೇಶನ, ಸೃಜನಶೀಲತೆ ಮತ್ತು ಅಭಿನಯದ ಮೇಲೆ ಕಿರುಚಿತ್ರ ವಿಜೇತರ ಆಯ್ಕೆ ಮಾಡಲಾಗುವುದು. ಕಿರುಚಿತ್ರ ನೋಂದಣಿಗೆ ಡಿ.13 ಕಡೇ ದಿನಾಂಕವಾಗಿದ್ದು, ಡಿ.14ರಂದು 10ಗಂಟೆಗೆ ಸಂಚಾರ ಮತ್ತು ಅಪರಾಧ ವಿಭಾಗ ಡಿಸಿಪಿ ಉಮಾಪ್ರಶಾಂತ್ ಅವರ ಕಚೇರಿಯಲ್ಲಿ ತಂಡಗಳ ವಿಷಯಗಳನ್ನು ಲಾಟ್ಸ್ ಮೂಲಕ ನಿರ್ಧರಿಸಲಾಗುವುದು.

ಬಹುಮಾನಗಳು: ವಿಜೇತರಿಗೆ ನಗದು ಬಹುಮಾನ ಜತೆ, ಸ್ಮರಣಿಕೆ, ಅಭಿನಂದನಾ ಪತ್ರ ನೀಡಲಾಗುವುದು. ವಿನ್ನರ್, ರನ್ನರ್ ಅಪ್, ಉತ್ತಮ ನಿರ್ದೇಶನ, 5 ಆಕರ್ಷಣ ಬಹುಮಾನ ನೀಡಲಾಗುವುದು ಎಂದು ಕಮಿಷನರ್ ಕಚೇರಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News