×
Ad

ಡಿ:16 ಮಂಜನಾಡಿಯಲ್ಲಿ ಎಸ್ಸೆಸ್ಸೆಫ್ ಟೀಮ್ ಹಸನೈನ್ ಟ್ರೈನಿಂಗ್ ಕ್ಯಾಂಪ್ 'ಖಿಯಾದ-2018'

Update: 2018-12-14 12:06 IST

ಕೋಣಾಜೆ, ಡಿ. 14: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಟೀಮ್ ಹಸನೈನ್  ಟ್ರೈನಿಂಗ್ ಕ್ಯಾಂಪ್ ಖಿಯಾದ-2018 ಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಕೆ.ಪಿ.ಸಿರಾಜುದ್ದೀನ್ ಸಖಾಫಿ ಕನ್ಯಾನ ಅಧ್ಯಕ್ಷತೆಯಲ್ಲಿ ಡಿ.16ರಂದು ಬೆಳಗ್ಗೆ 9 ಗಂಟೆಗೆ ಅಲ್- ಮದೀನಾ ಮಂಜನಾಡಿಯಲ್ಲಿ ನಡೆಯಲಿದೆ.

ಅಲ್-ಮದೀನಾ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ  ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ  ಕಾರ್ಯದರ್ಶಿ ಮೌಲಾನಾ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ಹಾಗೂ ರಾಜ್ಯ ಕೋಶಾಧಿಕಾರಿ ಶರೀಫ್ ಮಾಸ್ಟರ್ ಬೆಂಗಳೂರು ತರಗತಿಯನ್ನು ನಡೆಸಲಿದ್ದಾರೆ.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್  ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ, ಕೋಶಾಧಿಕಾರಿ ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರ್ , ಎಸ್ಸೆಸ್ಸೆಪ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ, ಕೋಶಾಧಿಕಾರಿ ಶರೀಫ್ ಮುಡಿಪು ಹಾಗೂ ರಾಜ್ಯ, ಜಿಲ್ಲಾ ನಾಯಕರು ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ಟೀಮ್ ಹಸನೈನ್ ರಾಜ್ಯ ಉಸ್ತುವಾರಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News