ಭಟ್ಕಳ: 80 ಲಕ್ಷ ​ರೂ. ಮೌಲ್ಯದ ವಿದೇಶಿ ಕರೆನ್ಸಿಯೊಂದಿಗೆ ಇಬ್ಬರ ಬಂಧನ

Update: 2018-12-14 12:17 GMT

ಭಟ್ಕಳ, ಡಿ. 14: ಸುಮಾರು 80 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿಯೊಂದಿಗೆ ಭಟ್ಕಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಭಟ್ಕಳ ಕಾಝಿಯಾ ಸ್ಟ್ರೀಟ್ ನಿವಾಸಿ ಹಸನ್ ಶಬ್ಬರ್ ಹಾಗೂ ತಕಿಯಾ ಸ್ಟ್ರೀಟ್ ನಿವಾಸಿ ಉಮೈರ್ ಅಹಮದ್ ಎಂದು ಗುರುತಿಲಾಗಿದೆ. 

ರೈಲು ಮೂಲಕ ಗೋವಾದಿಂದ ಮಂಗಳೂರಿಗೆ ಅಕ್ರಮ ವಿದೇಶಿ ಕರೆನ್ಸಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೆರೆಗೆ ಕಾರ್ಯಾಚರಣೆಗಿಳಿದ ಪೊಲೀಸರು ಮುರುಡೇಶ್ವರ ರೈಲು ನಿಲ್ದಾಣದಲ್ಲಿ ರೈಲನ್ನು ಹತ್ತಿ ಆರೋಪಿಗಳನ್ನು ವಿದೇಶಿ ಕರೆನ್ಸಿ ಸಮೇತ ಬಂಧಿಸಿದ್ದಾರೆ.

ಪೊಲೀಸರ ಮಾಹಿತಿಯಂತೆ ಇಬ್ಬರ ಬಳಿಯಿಂದ ಡಾಲರ್, ಪೌಂಡ್, ಯೂರೋ, ದಿರ್ಹಂ, ರಿಯಾಲ್ ಮತ್ತಿತರರ ವಿದೇಶಿ ಕರೆನ್ಸಿ ಸೇರಿದಂತೆ ಒಟ್ಟು 80ಲಕ್ಷ ಮೌಲ್ಯದ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. 

ಮಂಗಳೂರು ಕಸ್ಟಮ್ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದ ಪೊಲೀಸರು ಮಂಗಳೂರು ನಿಂದ ರೇವಿನ್ಯೂ ಇಂಟಲಿಜೆನ್ಸಿ ಯ ಸಹಾಯಕ ನಿರ್ದೇಶಕ ಶ್ರೇಯಸ್ ತಮ್ಮ ಸಿಬ್ಬಂದಿಗಳೊಂದಿಗೆ ಭಟ್ಕಳಕ್ಕೆ ಆಗಮಿಸಿ ಇಬ್ಬರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ.

ಗೋವಾ ಪ್ರವಾಸಿಗರಿಂದ ಭಾರತೀಯ ಕರೆನ್ಸಿ ಬದಲಾವಣೆ ಮಾಡಿ ವಿದೇಶಿ ಕರೆನ್ಸಿಯನ್ನು ಕೊಂಡುಕೊಳ್ಳುತ್ತಿರುವ ಮಾಹಿತಿ ವಿಚಾರಣೆಯಿಂದ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News