'ಸೃಷ್ಠಿ 2018' ಅಂತರ್ ಪದವಿಪೂರ್ವ ಕಾಲೇಜು ಶೈಕ್ಷಣಿಕ, ಕ್ರೀಡಾ ಸ್ಪರ್ಧೆ ಸಂಪನ್ನ

Update: 2018-12-14 12:22 GMT

ಭಟ್ಕಳ, ಡಿ. 14:  ಇಲ್ಲಿನ ಸಾಗರ ರಸ್ತೆಯ ಗುರು ಸುಧೀಂದ್ರ ಪದವಿ ಕಾಲೇಜಿನಲ್ಲಿ ಡಿ.13 ರಂದು ಆರಂಭಗೊಂಡ 'ಸೃಷ್ಠಿ 2018' ಅಂತರ್ ಪದವಿಪೂರ್ವ ಕಾಲೇಜು ಶೈಕ್ಷಣಿಕ ಹಾಗೂ ಕ್ರೀಡಾ ಸ್ಪರ್ಧೆಯು ಶುಕ್ರವಾರ ಮುಕ್ತಾಯಗೊಂಡಿತು.

ಉದ್ಘಾಟಕರಾಗಿ ಆಗಮಿಸಿದ ಭಟ್ಕಳ ಎಜ್ಯಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ. ಸುರೇಶ್ ವಿ ನಾಯಕ ಮಾತನಾಡಿ, "ಜೀವನದಲ್ಲಿ ಶಿಸ್ತು, ಸಂಯಮ, ಏಕಾಗ್ರತೆಯನ್ನು ಅಳವಡಿಸಿಕೊಂಡು, ಉನ್ನತ ಸ್ಥರದ ಆಲೋಚನೆಯೊಂದಿಗೆ ಯಶಸ್ಸನ್ನು ಸಾಧಿಸಬೇಕು" ಎಂದರು.

ಭಟ್ಕಳ ಎಜ್ಯಕೇಶನ್ ಟ್ರಸ್ಟ್ ನ ಆಡಳಿತಾಧಿಕಾರಿ ನಾಗೇಶ್ ಎಂ ಭಟ್ಟ ಮಾತನಾಡಿ " ವಿದ್ಯಾರ್ಥಿಗಳು ತಮಗೆ ದೊರೆಯುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ತಮ್ಮ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬೇಕು" ಎಂಬ ಆಶಯವನ್ನು ವ್ಯಕ್ತಪಡಿಸಿದರು. ಶ್ರೀ ಗುರು ಸುಧೀಂದ್ರ ಬಿ.ಸಿ.ಎ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ಮಾತನಾಡಿ " ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡರಲ್ಲೂ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ, ಯಶಸ್ಸುಗಳಿಸಬೇಕು" ಎಂದು ಹೇಳಿ ಶುಭ ಹಾರೈಸಿದರು.

ಡಿ.13ರಂದು ಶೈಕ್ಷಣಿಕ ಪ್ರಸ್ತುತಿ ಸ್ಪರ್ಧೆ ಹಾಗೂ 14 ರಂದು ವಾಲಿಬಾಲ್ ಪಂದ್ಯಾವಳಿ ಜರುಗಿತು, ಜಿಲ್ಲೆಯ ಹಲವಾರು ಪದವಿಪೂರ್ವ ಕಾಲೇಜುಗಳು ಭಾಗವಹಿಸಿದ್ದವು. ದಿ ನ್ಯೂ ಇಂಗ್ಲೀಷ್ ಪದವಿಪೂರ್ವ ಕಾಲೇಜು ಹಾಗೂ ಬೀನಾವೈದ್ಯ ಕಾಲೇಜಿನ ತಂಡಗಳು ಉತ್ತಮ ಪ್ರದರ್ಶನ ನೀಡಿ ಎಲ್ಲರ ಗಮನಸೆಳೆದವು. ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಉಪನ್ಯಾಸಕರಾದ ವಿಶ್ವನಾಥ ಭಟ್ಟ ಸ್ವಾಗತಿಸಿದರು, ವಿದ್ಯಾರ್ಥಿಗಳಾದ ವೈಭವ ನಾಯ್ಕ, ಅರ್ಚನಾ ಹೆಬ್ಬಾರ ನಿರೂಪಿಸಿದರು ಹಾಗೂ ಉಪನ್ಯಾಸಕರಾದ ಪಿ ಎಸ್ ಹೆಬ್ಬಾರ ವಂದಿಸಿದರು.

ವಾಲಿಬಾಲ್ ಪಂದ್ಯಾವಳಿಯಲ್ಲಿ ಕುಮಟಾದ ಎ ವಿ ಬಾಳಿಗಾ ಪದವಿಪೂರ್ವ ಕಾಲೇಜು, ಭಟ್ಕಳದ ದಿ ನ್ಯೂ ಇಂಗ್ಲೀಷ್ ಪದವಿಪೂರ್ವ ಕಾಲೇಜು ಹಾಗೂ ಶಿರಾಲಿಯ ಜನತಾ ವಿದ್ಯಾಲಯ ಪದವಿಪೂರ್ವ ಕಾಲೇಜು ತಂಡಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News