ಕೌಶಲ್ಯ-ಉದ್ಯೋಗ ಕಾರ್ಯಕ್ರಮದ ಸಮಾರೋಪ

Update: 2018-12-14 12:53 GMT

ಮಂಗಳೂರು, ಡಿ.14: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು, ಹಾಗೂ ಸಿಡಾಕ್ ಧಾರವಾಡ ಇವುಗಳ ಜಂಟಿ ಆಶ್ರಯದಲ್ಲಿ ಪರಿಶಿಷ್ಟ ಪಂಗಡದ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳಿಗೆ ಜರುಗಿದ ಕೌಶಲ್ಯ-ಉದ್ಯೋಗ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ಸಿಒಡಿಪಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಇಲಾಖೆಯ ಜಂಟಿ ನಿರ್ದೇಶಕ ಅರವಿಂದ ಬಾಳೇರಿ ಅಧ್ಯಕ್ಷತೆ ವಹಿಸಿದ್ದರು. ಸಿಒಡಿಪಿ ಸಂಸ್ಥೆಯ ಆಡಳಿತ ನಿರ್ದೇಶಕ ಫಾ.ಓಸ್ವಾಲ್ಡ್ ಮೊಂತೆರೋ ಮುಖ್ಯ ಅತಿಥಿಯಾಗಿದ್ದರು.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಅನಿತಾ ಮಡ್ಲೂರು ಶಿಬಿರಾರ್ಥಿಗಳಿಗೆ ಅರ್ಹತಾ ಪತ್ರ ವಿತರಿಸಿದರು. ಕೌಶಲ್ಯಾಭಿವೃದ್ಧಿ ಇಲಾಖೆಯ ಜಿಲ್ಲಾ ಕೌಶಲ್ಯಾಧಿಕಾರಿ ತಾರಾನಾಥ ಸರಕಾರದಿಂದ ದೊರೆಯುವ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಸಿಡಾಕ್‌ನ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಸ್ವಾಗತಿಸಿದರು. ಸಿಡಾಕ್‌ನ ಉಡುಪಿ ಕೇಂದ್ರ ವ್ಯವಸ್ಥಾಪಕರಾದ ಪೃಥ್ವಿರಾಜ್ ನಾಯಕ್ ವಂದಿಸಿದರು. ಮಂಗಳೂರಿನ ಕೇಂದ್ರ ವ್ಯವಸ್ಥಾಪಕ ನಾಯಕ್ ಪ್ರಭು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News