ಎಡೆಸ್ನಾನ ರದ್ದು: ಸಿಪಿಎಂ ಸ್ವಾಗತ
Update: 2018-12-14 19:59 IST
ಉಡುಪಿ, ಡಿ.14: ಉಡುಪಿಯ ಶ್ರೀಕೃಷ್ಣ ಮಠದ ಷಷ್ಟಿ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ಎಡೆಸ್ನಾನ ಮತ್ತು ಮಡೆಸ್ನಾನ ಪದ್ದತಿಯನ್ನು ರದ್ದು ಮಾಡಿರುವ ಪಲಿಮಾರು ಮಠದ ಸ್ವಾಮೀಜಿಯ ಕ್ರಮವನ್ನು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಸ್ವಾಗತಿಸಿದೆ.
ಅದೇ ರೀತಿ ಶ್ರೀಕೃಷ್ಣ ಮಠದಲ್ಲಿ ಪಂಕ್ತಿಭೇದ ಇನ್ನೂ ಚಾಲ್ತಿಯಲ್ಲಿದ್ದು ಅದನ್ನು ಕೊನೆಗಾಣಿಸಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪಲಿಮಾರು ಸ್ವಾಮೀಜಿ ಅವರಲ್ಲಿ ಮನವಿ ಮಾಡಿದ್ದಾರೆ.