×
Ad

ಡಿ.22ರಿಂದ ತುಳುಕೂಟದಿಂದ ಕೆಮ್ತೂರು ತುಳು ನಾಟಕ ಪರ್ಬ

Update: 2018-12-14 21:02 IST

ಉಡುಪಿ, ಡಿ.14: ಉಡುಪಿ ತುಳುಕೂಟದ ವತಿಯಿಂದ 17ನೇ ವರ್ಷದ ಕೆಮ್ತೂರು ತುಳು ನಾಟಕ ಪರ್ಬ (ದಿ.ಕೆಮ್ತೂರು ದೊಡ್ಡಣ್ಣ ಶೆಟ್ರೆ ನೆಂಪುದ ತುಳು ನಾಟಕ ಪಂತೊ) ಡಿ.22ರಿಂದ 29ರವರೆಗೆ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಪ್ರತಿದಿನ ಸಂಜೆ 6:30ರಿಂದ ನಡೆಯಲಿದೆ.

ಈ ಬಾರಿಯ ಸ್ಪರ್ಧೆಯಲ್ಲಿ ಒಟ್ಟು 8 ನಾಟಕಗಳು ಪ್ರದರ್ಶಿತಗೊಳ್ಳಲಿವೆ. ನಾಟಕ ಸ್ಪರ್ಧೆಯನ್ನು 22ರಂದು ಸಂಜೆ 5:45ಕ್ಕೆ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ ಮತ್ತು ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ ಆಗಮಿಸಲಿದ್ದು, ತುಳುಕೂಟದ ಅಧ್ಯಕ್ಷ ವಿ.ಜಿ.ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ಮೊದಲ ದಿನ ಡಿ.22ರಂದು ಅಂಬಲಪಾಡಿ ರಂಗಚಾವಡಿ ತಂಡದಿಂದ ‘ಈ ಪೊರ್ಲು ತೂವೊಡ್ಚಿ’, 23ರಂದು ಸಸಿಹಿತ್ಲು ರಂಗಸುದರ್ಶನ ತಂಡದಿಂದ ‘ಸೀತೆಗ್ ಇತ್ತೆ ಅರ್ಥಾಂಡ್’, 24ರಂದು ಪಟ್ಲ ಭೂಮಿಗೀತ ಸಾಂಸ್ಕೃತಿಕ ವೇದಿಕೆಯಿಂದ ‘ಟ್ರೈನ್ ಟು ಪಾಕಿಸ್ತಾನ್’, 25ರಂದು ಮಣಿಪಾಲ ಸಂಗಮ ಕಲಾವಿದರಿಂದ ‘ರಕ್ಕಸ ತಂಗಡಿ’, 26ರಂದು ಉಡುಪಿ ರಂಗಭೂಮಿಯಿಂದ ‘ಐಸಿಯು’, 27ರಂದು ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯಿಂದ ‘ಕ್ಯಾತ್ಯಾಯಿನಿ’, 28ರಂದು ಕೊಡವೂರು ನವಸುಮ ರಂಗಮಂಚದಿಂದ ‘ಒಂಜಿ ಸಿರೆ ಅಸರ್’ ಮತ್ತು 29ರಂದು ಮಲ್ಪೆ ಕರಾವಳಿ ಕಲಾವಿದೆರ್ ತಂಡದಿಂದ ‘ಬೊಜ್ಜ’ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ನಾಟಕ ಸ್ಪರ್ಧೆಯ ಸಂಚಾಲಕರಾದ ಬಿ.ಪ್ರಭಾಕರ ಭಂಡಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News