ತೆಲಂಗಾಣದ ನೂತನ ಗೃಹಸಚಿವ ಮುಹಮ್ಮದ್ ಮಹಮೂದ್ ಅಲಿ

Update: 2018-12-14 16:30 GMT

ಹೈದರಾಬಾದ್, ಡಿ.14: ತೆಲಂಗಾಣದ ಮುಖ್ಯಮಂತ್ರಿಯಾಗಿ ಕೆ. ಚಂದ್ರಶೇಖರ ರಾವ್ ಪ್ರಮಾಣವಚನ ಸ್ವೀಕರಿಸಿದಾಗ ಅವರ ಜತೆ ನೂತನ ಗೃಹ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು ಮುಹಮ್ಮದ್ ಮಹಮೂದ್ ಅಲಿ. ಈ ಹಿಂದಿನ ಸರಕಾರದಲ್ಲಿ ಅವರು ಅಲ್ಪಸಂಖ್ಯಾತ ಮತ್ತು ಕಂದಾಯ ಸಚಿವ ಹುದ್ದೆಯ ಜತೆಗೆ ಉಪಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು.

ತೆಲಂಗಾಣ ವಿಧಾನಪರಿಷತ್ ಸದಸ್ಯರಾಗಿರುವ ಅಲಿ, 2001ರಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಆಂದೋಲನವನ್ನು ಮತ್ತೆ ಆರಂಭಿಸಲು ರಾವ್ ಅವರು ತೆಲಂಗಾಣ ರಾಷ್ಟ್ರೀಯ ಸಮಿತಿ ಆರಂಭಿಸಿದಂದಿನಿಂದಲೂ ಅವರ ಜತೆಗಿದ್ದಾರೆ. ಈ ಹಿಂದಿನ ಸರಕಾರದಲ್ಲಿ ಅಲಿ ಹೊರತಾಗಿ ಕದಿಯಂ ಶ್ರೀಹರಿ ಕೂಡ ಉಪಮುಖ್ಯಂತ್ರಿಯಾಗಿದ್ದರು. ಅಲಿ ಈ ಬಾರಿಯೂ ಉಪಮುಖ್ಯಮಂತ್ರಿಯಾಗಿ ನೇಮಕವಾಗುವ ಸಾಧ್ಯತೆಯಿದೆ.

ರಾವ್ ಅವರ ಸಚಿವ ಸಂಪುಟದಲ್ಲಿ ಅವರೊಬ್ಬರೇ ಮುಸ್ಲಿಂ ಸಚಿವರಾಗಿರುವ ಸಂಭಾವ್ಯತೆಯಿದೆ. ರಾವ್ ಅವರಿಗೆ ಎಲ್ಲಾ ಸಮುದಾಯಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕಾಗಿರುವುದರಿಂದ ಪಕ್ಷದ ಏಕೈಕ ಮುಸ್ಲಿಂ ವಿಧಾನಸಭಾ ಸದಸ್ಯ ಶಕೀಲ್ ಅಮೀರ್ ಅವರಿಗೆ ಮಂತ್ರಿ ಹುದ್ದೆ ದೊರೆಯುವ ಸಾಧ್ಯತೆ ಇಲ್ಲವೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News