ಕಾರು ಢಿಕ್ಕಿ: ಮಹಿಳೆ ಮೃತ್ಯು
Update: 2018-12-14 22:37 IST
ಕಾಪು, ಡಿ.14: ಉದ್ಯಾವರ ಗುಡ್ಡೆಯಂಗಡಿ ಬಬ್ಬುಸ್ವಾಮಿ ದೈವಸ್ಥಾನದ ಹತ್ತಿರ ಡಿ.13ರಂದು ಸಂಜೆ 7ಗಂಟೆ ಸುಮಾರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಸರಸ್ವತಿ ದೇವಾಡಿಗ ಎಂದು ಗುರುತಿಸಲಾಗಿದೆ. ಇವರು ತನ್ನ ಮನೆಯವರೊಂದಿಗೆ ಉದ್ಯಾವರದ ಎಸ್‌ಡಿಎಂ ಆಸ್ಪತ್ರೆಯಲ್ಲಿ ದಾಖಲಾಗಿ ರುವ ಸಂಬಂದಿಕರನ್ನು ನೋಡಲು ಹೋಗುತ್ತಿದ್ದಾಗ ಕಟಪಾಡಿ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರು ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಸರಸ್ವತಿ ದೇವಾಡಿಗ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.