×
Ad

ಹಾಲಾಡಿ, ಕೆಮ್ಮಣ್ಣು : ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗೆ ಅರ್ಜಿ

Update: 2018-12-14 22:43 IST

ಉಡುಪಿ, ಡಿ.14: ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಹಾಗೂ ಉಡುಪಿ ತಾಲೂಕಿನ ಕೆಮ್ಮಣ್ಣು ಗ್ರಾಪಂ ಗ್ರಂಥಾಲಯದಲ್ಲಿ ಖಾಲಿ ಇರುವ ಮೇಲ್ವಿಚಾರಕ ಸ್ಥಾನವನ್ನು ಗೌರವ ಸಂಭಾವನೆ ಆಧಾರದ ಮೇಲೆ ನೇಮಕಾತಿ ಗಾಗಿ ಕ್ರಮವಾಗಿ ಮಾಡಲು ಬ್ಯಾಕ್ ಲಾಗ್ ಹುದ್ದೆ ಪರಿಶಿಷ್ಟ ಜಾತಿ-ಅಂಗವಿಕಲ ಹಾಗೂ 2ಎ ಅಂಗವಿಕಲ ಅ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಯಾ ಗ್ರಾಮದಲ್ಲಿ ಪರಿಶಿಷ್ಟ ಜಾತಿ-ಅಂಗವಿಕಲ ಹಾಗೂ 2ಎ ಅಂಗವಿಕಲ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ಬ್ಯಾಕ್‌ಲಾಗ್ ಹುದ್ದೆಯಡಿ ಪರಿಶಿಷ್ಟ ಜಾತಿ ಹಾಗೂ ಇತರೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸೆಸೆಲ್ಸಿ ಉತ್ತೀರ್ಣರಾಗಿರಬೇಕು ಹಾಗೂ ಅದೇ ಗ್ರಾಪಂ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ಭರ್ತಿ ಮಾಡಿದ ಅರ್ಜಿ ಹಾಗೂ ಇತರೆ ದೃಢೀಕೃತ ದಾಖಲೆಗಳನ್ನು ಆಯಾ ಗ್ರಾಂಗೆ ಸಲ್ಲಿಸಲು ಡಿ.28 ಕೊನೆಯ ದಿನ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಹಾಲಾಡಿ ಗ್ರಾಪಂ, ಕೆಮ್ಮಣ್ಣು ಗ್ರಾಪಂ ಅಥವಾ ಉಡುಪಿಯ ಜಿಲ್ಲಾ ಕೇಂದ್ರ ಗ್ರಂಥಾಲಯವನ್ನು (ದೂರವಾಣಿ ಸಂಖ್ಯೆ: 0820-2523438) ಸಂಪರ್ಕಿಸುವಂತೆ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News