ಎಸ್ಸೆಸ್ಸೆಫ್ ಮೇಲಂಗಡಿ ಶಾಖೆಯಲ್ಲಿ ವಾರ್ಷಿಕ ಕೌನ್ಸಿಲ್

Update: 2018-12-14 18:09 GMT

ಮಂಗಳೂರು, ಡಿ. 14: ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧೀನದ ಎಸ್ಸೆಸ್ಸೆಫ್ ಮೇಲಂಗಡಿ ಶಾಖೆಯ ವಾರ್ಷಿಕ ಕೌನ್ಸಿಲ್ ತಾಜುಲ್ ಉಲಮಾ ಸುನ್ನೀ ಸೆಂಟರ್, ಎಸ್ಸೆಸ್ಸೆಫ್ ಮೇಲಂಗಡಿ ಶಾಖಾ ಕಛೇರಿಯಲ್ಲಿ ಶಾಖಾ ಅಧ್ಯಕ್ಷ  ನವಾಝ್  ಅಧ್ಯಕ್ಷತೆಯಲ್ಲಿ ನಡೆಯಿತು.

ಶಾಖಾ ಕಾರ್ಯದರ್ಶಿ ಮುಹಾಝ್ ಇಸ್ಮಾಯಿಲ್ ಸ್ವಾಗತಿಸಿ, ಸಭೆಗೆ ಚಾಲನೆ ನೀಡಿದರು. ಪ್ರಸ್ತುತ ಕೌನ್ಸಿಲ್ಗೆ ದ.ಕ ಜಿಲ್ಲಾ ಎಸ್ಸೆಸ್ಸೆಫ್ ನಾಯಕರಾದ ಸೆಯ್ಯಿದ್ ಖುಬೈಬ್ ತಂಙಳ್, ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಸಖಾಫಿ, ಸೆಕ್ಟರ್ ಅಧ್ಯಕ್ಷ ಮುಸ್ತಫಾ ಮಾಸ್ಟರ್, ಸೆಕ್ಟರ್ ಎಲೆಕ್ಷನ್ ಆಫೀಸರ್ ಸಿರಾಜ್ ಅಕ್ಕರಕೆರೆ ಮತ್ತು ಮುಝಮ್ಮಿಲ್ ಉಸ್ತಾದ್  ಸಭೆಯಲ್ಲಿದ್ದರು.

ನಂತರ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಇಮ್ರಾನ್ , ಉಪಾಧ್ಯಕ್ಷರುಗಳಾಗಿ ಹಸೈನಾರ್ ಉಸ್ತಾದ್, ಶಫೀಕ್, ಖಲೀಲ್, ಪ್ರಧಾನ ಕಾರ್ಯದರ್ಶಿಯಾಗಿ ಖಲಂದರ್, ಜೊತೆ ಕಾರ್ಯದರ್ಶಿಯಾಗಿ  ವಾನಿಶ್, ಸೌಹಾನ್, ಅಫ್ರೀದ್, ಕೋಶಾಧಿಕಾರಿಯಾಗಿ ರಮೀಝ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುಹಾಝ್, ಹೈಸ್ಕೂಲ್ ಕನ್ವೀನರಾಗಿ ಅಶ್ವಾನ್ , ಶಿಹಾನ್ ರವರನ್ನು ಒಳಗೊಂಡ 25 ಕಾರ್ಯಕಾರಿ ಸಮಿತಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಕಾರ್ಯದರ್ಶಿ ಖಲಂದರ್  ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News