ಡಿ.17ರಿಂದ ಅರೆಹೊಳೆ ರಂಗಹಬ್ಬ

Update: 2018-12-15 12:18 GMT

ಮಂಗಳೂರು, ಡಿ.15: ಅರೆಹೊಳೆ ಪ್ರತಿಷ್ಠಾನ ನಗರದಲ್ಲಿ ಅರೆಹೊಳೆ ರಂಗಹಬ್ಬದ ಮೂಲಕ ನಾಟಕೋತ್ಸವವನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಪ್ರಸಕ್ತ ವರ್ಷವೂ ಅಸ್ತಿತ್ವ ಹಾಗೂ ಪಾದುವಾ ರಂಗ ಅಧ್ಯಯನ ಕೇಂದ್ರಗಳ ಸಹಭಾಗಿತ್ವದಲ್ಲಿ ಡಿ.17ರಿಂದ 23ರವರೆಗೆ ನಗರದ ಡಾನ್‌ಬಾಸ್ಕೋ ಹಾಲ್‌ನಲ್ಲಿ ಅರೆಹೊಳೆ ರಂಗಹಬ್ಬವನ್ನು ಆಯೋಜಿಸಲಾಗುತ್ತಿದೆ ಎಂದು ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಯಕ್ಷಗಾನ, ನೃತ್ಯೋತ್ಸವ, ನಾಟಕಗಳು, ಏಕವ್ಯಕ್ತಿ ರಂಗ ಪ್ರಯೋಗ, ರಂಗಗೀತೆ, ಪೂಜಾ ಕುಣಿತ ಸೇರಿದಂತೆ ವಿವಿಧ ಪ್ರಕಾರಗಳ ಪ್ರಸ್ತುತಿಯನ್ನೊ ಳಗೊಂಡ ರಂಗಹಬ್ಬವನ್ನು ಆಯೋಜಿಸಲಾಗಿದೆ. ಅರೆಹೊಳೆ ಪ್ರತಿಷ್ಠಾನದಿಂದ ವಿವಿಧ ಸಾಧಕರಿಗೆ ನೀಡುವ ವಾರ್ಷಿಕ ಪ್ರಶಸ್ತಿಗಳನ್ನು ಪ್ರತಿ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದರು.

ಡಿ.17ರಂದು ನಡೆಯುವ ರಂಗಹಬ್ಬ ಉದ್ಘಾಟನಾ ಸಮಾರಂಭವನ್ನು ಬಿಕರ್ನಕಟ್ಟೆ ಬಲಮುರಿ ಸಿದ್ದಿ ವಿನಾಯಕ ದೇವಸ್ಥಾನದ ಮೊಕ್ತೇಸರ ವಿವೇಕಾನಂದ ನಿಗ್ಲೇ ನಡೆಸಿಕೊಡಲಿದ್ದಾರೆ. ಕ್ಯಾ.ಗಣೇಶ್ ಕಾರ್ಣಿಕ್, ಪಾದುವಾ ಕಾಲೇಜಿನ ಪ್ರಾಂಶುಪಾಲ ಫಾ.ಆಲ್ವಿನ್ ಸೆರಾವೋ ಮುಖ್ಯಅತಿಥಿಯಾಗಿ ಭಾಗವಹಿಸಲಿ ದ್ದಾರೆ ಎಂದರು.

ಡಿ.18ರಂದು ನಡೆಯುವ ನಾಟಕೋತ್ಸವವನ್ನು ರಂಗಕರ್ಮಿ ಕೆ.ವಿ.ಅಕ್ಷರ ನೆರವೇರಿಸಲಿದ್ದಾರೆ. ಇನ್ನೋರ್ವ ರಂಗಕರ್ಮಿ ಶ್ರೀಪಾದ್ ಭಟ್, ತಾರಾನಾಥ ಬೋಳಾರ್ ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದಾರೆ. ಡಿ.22ರಂದು ಸಂಜೆ 5:30ಕ್ಕೆ ನಾಟಕೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ. ಡಿ.23ರಂದು ಅರೆಹೊಳೆ ರಂಗಹಬ್ಬದ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಸ್ತಿತ್ವ ಪ್ರತಿಷ್ಠಾನದ ಅಧ್ಯಕ್ಷ ಕ್ರಿಸ್ಟೋಪರ್ ಡಿಸೋಜ ನಿನಾಸಂ, ಅರೆಹೊಳೆ ಪ್ರತಿಷ್ಠಾನದ ಉಪಾಧ್ಯಕ್ಷೆ ಗೀತಾ ಅರೆಹೊಳೆ ಹಾಗೂ ಪ್ರಧಾನ ಕಾರ್ಯದರ್ಶಿ ವಿಶಾಲಾಕ್ಷಿ ರಾವ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News