ಮೀನು ಸಾಗಾಟ ವಿವಾದ: ಗೋವಾ ಅಧಿಕಾರಿಗಳ ಕ್ರಮಕ್ಕೆ ಖಂಡನೆ

Update: 2018-12-15 14:10 GMT

ಉಡುಪಿ, ಡಿ.15: ಕರ್ನಾಟಕದ ಮೀನುಗಾರರು ಗೋವಾ ಸರಕಾರ ವಿಧಿಸಿದ ನಿಯಮಗಳ ಪ್ರಕಾರವೇ ಗೋವಾಕ್ಕೆ ಮೀನು ಸಾಗಿಸಿದರೂ ಅಲ್ಲಿಯ ಅಧಿಕಾರಿಗಳು ಉದ್ಧಟತನದಿಂದ ಸುಮಾರು ಹತ್ತು ಲಕ್ಷ ಮೌಲ್ಯದ ಮೀನು ಗಳನ್ನು ತ್ಯಾಜ್ಯ ತೊಟ್ಟಿಗೆ ಎಸೆದಿರುವುದನ್ನು ಅಖಿಲ ಕರ್ನಾಟಕ ಮೀನುಗಾರರ ಸಂಘಟನೆ ಖಂಡಿಸಿದೆ.

ಈ ಬಗ್ಗೆ ಗೋವಾ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯ ಮಂತ್ರಿ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸಂಘಟನೆಯ ರಾಜ್ಯ ಸಂಚಾಲಕ ಸುಧೀರ್ ಕಾಂಚನ್ ಬೇಂಗ್ರೆ, ಪದಾಧಿಕಾರಿಗಳಾದ ಶ್ರೀನಿವಾಸ್ ಕಲ್ಮಾಡಿ, ಗಣಪತಿ ಮಾಂಗ್ರೆ ಕಾರವಾರ, ರಮೇಶ್ ಮರಕಾಲ ಉಪ್ಪೂರು, ಶೇಖರ ಸಾಲ್ಯಾನ್ ಪಡುಬಿದ್ರೆ, ಪ್ರದೀಪ್ ಖಾರ್ವಿ ಹಂಗಾರಕಟ್ಟೆ, ಆನಂದ ತಾಂಡೇ ಲ್ಕರ್ ಕೋಡಿಕನ್ಯಾನ, ರೋಶನ್ ಬಾನವಳಿಕರ್ ಕಾರವಾರ, ರಾಜು ಬಾನವಳಿ ಕರ್ ಕಾರವಾರ, ನಾಗೇಶ್ ಮೊಗೇರ ಕೋಟೇಶ್ವರ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News