ಶಿರ್ವ: ನಗದು ರಹಿತ ವ್ಯವಹಾರ-ಮಾಹಿತಿ ಕಾರ್ಯಾಗಾರ

Update: 2018-12-15 14:24 GMT

ಶಿರ್ವ, ಡಿ.15: ಪುತ್ತೂರು ಸರಸ್ವತಿ ಚಾರಿಟೇಬಲ್ ಟ್ರಸ್ಟ್, ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಶಿರ್ವ ಶಾಖೆ, ಶಿರ್ವ ರೋಟರಿ ಕ್ಲಬ್, ಮಹಿಳಾ ಮಂಡಲ, ಕಾರು ಮಾಲಕ ಚಾಲಕರ ಸಂಘ, ಅಟೋರಿಕ್ಷಾ ಮಾಲಕ ಚಾಲಕರ ಸಂಘಗಳ ಸಹಭಾಗಿತ್ವದಲ್ಲಿ ನಗದು ರಹಿತ ವ್ಯವಹಾರ-ಮಾಹಿತಿ ಕಾರ್ಯಾ ಗಾರವು ಇತ್ತೀಚೆಗೆ ಶಿರ್ವ ಮಹಿಳಾ ಸೌಧದಲ್ಲಿ ಜರಗಿತು.

ಕಾರ್ಯಾಗಾರವನ್ನು ಉದ್ಘಾಟಿಸಿದ ಜಿಪಂ ಸದಸ್ಯ ವಿಲ್ಸನ್ ರೊಡ್ರಿಗಸ್ ಮಾತನಾಡಿ, ಬದಲಾಗುತ್ತಿರುವ ಜಗತ್ತಿನಲ್ಲಿ ಆಧುನಿಕ ತಾಂತ್ರಿಕತೆ ಆರ್ಥಿಕ ಕ್ಷೇತ್ರಗಳಲ್ಲೂ ಪ್ರಚಲಿತವಾಗುತ್ತಿದ್ದು, ದೇಶದ ಎಲ್ಲಾ ಬ್ಯಾಂಕ್‌ಗಳೂ ಸೇರಿದಂತೆ ಸಹಕಾರಿ ಸಂಸ್ಥೆಗಳಲ್ಲೂ ನಗದು ರಹಿತ ವ್ಯವಹಾರಕ್ಕೆ ಆದ್ಯತೆ ನೀಡಲಾಗುತ್ತಿದೆ. ನಗದು ರಹಿತ ವ್ಯವಹಾರ ಆರ್ಥಿಕ ಕ್ಷೇತ್ರದ ಮೈಲುಗಲ್ಲು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ, ಶಿರ್ವ ಸಂತ ಮೇರಿ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ರಾಜನ್ ವಿ.ಎನ್., ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ವಿನಯಕುಮಾರ್ ಕಂದಡ್ಕ ನಗದು ರಹಿತ ವ್ಯವಹಾರದ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಟ್ರಸ್ಟ್‌ನ ಟ್ರಸ್ಟಿ ಪುರುಷೋತ್ತಮ ಪ್ರಭು ವಹಿಸಿದ್ದರು. ಅಟೋರಿಕ್ಷಾ ಮಾಲಕ ಚಾಲಕರ ಸಂಘದ ಅಧ್ಯಕ್ಷ ಮೇಶ ಬಂಗೇರ ಉಪಸ್ಥಿತರಿದ್ದರು.

ಶಿರ್ವ ಶಾಖೆಯ ವ್ಯವಸ್ಥಾಪಕ ಶಿವಪ್ರಸಾದ್ ಟಿ. ಪ್ರಾಸ್ತಾವಿಕವಾಗಿ ಮಾತನಾಡಿ ದರು. ಶಿರ್ವ ರೋಟರಿ ಅಧ್ಯಕ್ಷ ದೆಂದೂರು ದಯಾನಂದ ಕೆ.ಶೆಟ್ಟಿ ಸ್ವಾಗತಿಸಿ ದರು. ಮಹಿಳಾ ಮಂಡಲದ ಅಧ್ಯಕ್ಷೆ ಬಬಿತಾ ಅರಸ್ ವಂದಿಸಿದರು. ಬಿಪಿನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News