ಬೀದಿ ದೀಪಕ್ಕೆ ಅಳವಡಿಸಿದ್ದ ಬ್ಯಾಟರಿ ಕಳುವು; ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

Update: 2018-12-15 15:24 GMT

ಭಟ್ಕಳ, ಡಿ. 15: ತಾಲೂಕಿನ ಗ್ರಾಮೀಣ ಪ್ರದೇಶವಾಗಿರುವ ಬೇಂಗ್ರೆ ಹಾಗೂ ಶಿರಾಲಿ ಪಂಚಾಯತ್ ವ್ಯಾಪ್ತಿಯ ಪ್ರದೇಶಗಳಲ್ಲಿ  ಸೋಲಾರ್ ಬೀದಿ ದೀಪಗಳಿಗೆ ಅಳವಡಿಸಿರುವ ಬ್ಯಾಟರಿಗಳನ್ನು ಕಳ್ಳವು ಮಾಡುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ತಾಲೂಕಿನ ಗ್ರಾಮೀಣ ಪ್ರದೇಶವಾಗಿರುವ ಶಿರಾಲಿ, ಬೇಂಗ್ರ, ಉತ್ತರಕೊಪ್ಪ ಗಳಲ್ಲಿ ಕಳೆದ ಹಲವು ದಿನಗಳಿಂದ ಸ್ಟ್ರೀಟ್ ಲೈಟ್ಸ್ ಗಳಿಗೆ ಅಳವಡಿಸಿದ್ದ ಸೋಲಾರ್ ಬ್ಯಾಟರಿಗಳು ಕಳುವು ಆಗಿದ್ದು ಈ ಕುರಿತಂತೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.

ಮಂದಿರದ ಬಳಿ ಇರುವ ಕಂಬಕ್ಕೆ ಅಳವಡಿಸಿದ್ದ ಸೋಲಾರ್ ಬ್ಯಾಟರಿಯನ್ನು ಕದಿಯುವ ದೃಶ್ಯಾವಳಿಗಳು ಆ ಮಂದಿರದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲಾ ತಾಣಾದಲ್ಲಿ ವೈರಲ್ ಆಗಿದೆ. 

ಇದರಿಂದಾಗಿ ಬ್ಯಾಟರಿ ಕಳ್ಳರನ್ನು ಪತ್ತೆ ಹಚ್ಚುವ ಕಾರ್ಯ ಸುಲಭವಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿದೆ. ಸಿಸಿಟಿವಿ ಫೋಟೇಜ್ ನಲ್ಲಿ ಇಬ್ಬರು ವ್ಯಕ್ತಿಗಳು ಬೈಕ್ ನಲ್ಲಿ ಬಂದು ಕಂಬಕ್ಕೆ ಅಳವಡಿಸಿದ್ದ ಬ್ಯಾಟರಿಯನ್ನು ತೆಗೆಯುತ್ತಿದ್ದಾರೆ. ವ್ಯಕ್ತಿಗಳ ಮುಖ ಅಸ್ಪಷ್ಟವಾಗಿದ್ದು ಬೈಕ್ ನ ನಂಬರ್ ಪ್ಲೇಟ್ ಆಧಾರದಲ್ಲಿ ಕಳ್ಳರನ್ನು ಪತ್ತೆ ಹಚ್ಚುವ ಕಾರ್ಯ ಸುಲಭವಾಗಿ ಮಾಡಬಹುದಾಗಿದ್ದು ಪೊಲೀಸರು ಈ ಕುರಿತಂತೆ ಶೀಘ್ರ ಕ್ರಮ ಜರಗಿಸಬೇಕು ಎಂದು ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.  ವ್ಯಾಪ್ತಿಯ ಹಲವು ಪ್ರದೇಶ ಅಳವಡಿಸಿದ್ದು ಕಳೆದ ಹಲವು ದಿನಗಳಿಂದ ಬೀದಿದೀಪಗಳಿಗೆ ಅಳವಡಿಸುತ್ತಿದ್ದ ಬ್ಯಾಟರಿ ಕಳುವು ಆಗುತ್ತಿದ್ದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News