ಡಿ.18: ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಕೃಷಿಕರ ಬೃಹತ್ ಪ್ರತಿಭಟನೆ

Update: 2018-12-15 15:34 GMT

 ಉಡುಪಿ, ಡಿ.15: ಜಿಲ್ಲೆಯ ಕೃಷಿಕರು ಎದುರಿಸುತ್ತಿರುವ ಜ್ವಲಂತ ಸಂಕಷ್ಟ- ಸಮಸ್ಯೆಗಳನ್ನು ಆಗಾಗ್ಯೆ ಜಿಲ್ಲಾಡಳಿತ-ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲದ ಹಿನ್ನೆಲೆಯಲ್ಲಿ ಹಾಗೂ ಸರಕಾರದ ವಿಳಂಬ ಧೋರಣೆ ಯನ್ನು ವಿರೋಧಿಸಿ ಜಿಲ್ಲಾ ಕೃಷಿಕ ಸಂವು ಡಿ.18ರ ಬೆಳಗ್ಗೆ 11 ಗಂಟೆಗೆ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ  ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ರೈತರ ಬೇಡಿಕೆಗಳು: ಸರಕಾರ ನುಡಿದಂತೆ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು. ಕಾಡು ಪ್ರಾಣಿಗಳ ಹಾವಳಿಯಿಂದ ಜಿಲ್ಲೆಯಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ. ಸರಕಾರ ಈ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು.

*ಮುಂಗಾರು ಹಂಗಾಮಿನ ಭತ್ತವನ್ನು ಅಕ್ಟೋಬರ್‌ನಿಂದ ಪ್ರಾರಂಭಿಸಿ, ವರ್ಷಪೂರ್ತಿ 2500ರೂ. ಬೆಂಬಲ ಬೆಲೆಯಲ್ಲಿ ಖರೀದಿಸುವ ವ್ಯವಸ್ಥೆ ಮಾಡಬೇಕು. ಭತ್ತ ನಾಟಿ/ಕಟಾವು ಸಮಯದಲ್ಲಿ ಕೃಷಿಕರಿಗೆ ಯಂತ್ರೋಪಕರಣ ಗಳ ಕೊರತೆ ನೀಗಿಸಲು ಬೇರೆಜಿಲ್ಲೆಗಳ ‘ಯಂತ್ರಧಾರೆ ಯೋಜನೆ’ ಯಂತ್ರಗಳನ್ನು ನಮ್ಮ ಜಿಲ್ಲೆಗೆ ತರಿಸುವ ವ್ಯವಸ್ಥೆಗಳಾಗಬೇಕು.

*120 ವರ್ಷಗಳಿಂದ ಅನುಭವಿಸಿಕೊಂಡು ಬರುತ್ತಿರುವ ರೈತರ ಕುಮ್ಕಿ ಹಕ್ಕನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸಬಾರದು. ಕುಮ್ಕಿ ಹಕ್ಕಿನ ಜಮೀನನ್ನು ಸರ್ವೇ ಮಾಡಿ ಸರಕಾರ ತನ್ನ ವಶಕ್ಕೆ ತೆಗೆದುಕೊಳ್ಳುವ ಹುನ್ನಾರವನ್ನು ಕೈ ಬಿಡಬೇಕು. ಆಗಾಗ ಲ್ಯವಾಗುವ ಇಲಾಖಾ ಸೌಲ್ಯಗಳು, ಸುತ್ತೋಲೆಗಳನ್ನು ಕೃಷಿ ಮತ್ತು ತೋಟಗಾರಿಕಾ ಇಲಾಖೆ ದಿನಪತ್ರಿಕೆ ಹಾಗೂ ಪ್ರಸಾರ ಮಾಧ್ಯಮಗಳಲ್ಲಿ ನಿರಂತರ ಪ್ರಕಟಿಸುವ ಕ್ರಮ ಕೈಗೊಳ್ಳಬೇಕು.

*ಇಲಾಖೆಗಳಿಂದ ಸಹಾಯಧನ ರೂಪದಲ್ಲಿ ದೊರೆಯುವ ಕೃಷಿ ಯಂತ್ರೋಪಕರಣಗಳ ಖರೀದಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಕ್ಷಣ ನಿಲ್ಲಿಸಬೇಕು. ಕೃಷಿಕರಿಗೆ ವೃದ್ಧಾಪ್ಯ 5000ರೂ. ವೇತನ ಮಾಸಿಕ ಸಿಗುವಂತೆ ಕ್ರಮಕೈಗೊಳ್ಳಬೇಕು.

*ಜಿಲ್ಲೆಯಲ್ಲಿ ಮರಳು ನೀತಿ ಸರಳೀಕರಿಸಿ ಈ ಹಿಂದಿನಂತೆಯೇ ಕಡಿಮೆ ದರಕ್ಕೆ ಮರಳು ಸಿಗುವಂತಾಗಬೇಕು. ಬ್ರಹ್ಮಾವರ ಸಹಕಾರಿ ಸಕ್ಕರೆ ಕಾಖಾನೆರ್ ಯನ್ನು ಪುನಃ ಆರಂಭಿಸಬೇಕು

ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಲಿದೆ. ಜಿಲ್ಲೆಯ ರೈತ ಬಾಂಧವರು ತಮ್ಮ ಒಗ್ಗಟ್ಟನ್ನು ತೋರಲು ಇದರಲ್ಲಿ ತಪ್ಪದೇ ಭಾಗವಹಿಸಬೇಕು ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News