4,400 ವರ್ಷಗಳ ಹಿಂದಿನ ಗೋರಿ ಪತ್ತೆ

Update: 2018-12-15 16:15 GMT

ಕೈರೋ (ಈಜಿಪ್ಟ್), ಡಿ. 15: ಈಜಿಪ್ಟ್ ರಾಜಧಾನಿ ಕೈರೋದ ದಕ್ಷಿಣ ಭಾಗದಲ್ಲಿರುವ ‘ಸಕ್ಕಾರ’ ಪಿರಮಿಡ್ ಆವರಣದಲ್ಲಿ 4,400 ವರ್ಷಗಳಿಗೂ ಹಿಂದಿನ ಪುರೋಹಿತರೊಬ್ಬರ ಗೋರಿಯನ್ನು ಪುರಾತನಶಾಸ್ತ್ರಜ್ಞರು ಪತ್ತೆಹಚ್ಚಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

‘‘ಇಂದು ನಾವು 2018ನೇ ವರ್ಷದ ಕೊನೆಯ ಸಂಶೋಧನೆಯನ್ನು ಪ್ರಕಟಿಸುತ್ತಿದ್ದೇವೆ. ಇದು ಹೊಸ ಸಂಶೋಧನೆಯಾಗಿದೆ. ಇದೊಂದು ಖಾಸಗಿ ಗೋರಿ’’ ಎಂದು ಪುರಾತನ ಇಲಾಖೆಯ ಸಚಿವ ಖಾಲಿದ್ ಅಲ್-ಎನನಿ ಸಭೆಯೊಂದರಲ್ಲಿ ತಿಳಿಸಿದರು. ಈ ಸಭೆಗೆ ಪತ್ರಕರ್ತರು ಸೇರಿದಂತೆ ಹಲವು ಅತಿಥಿಗಳನ್ನು ಆಹ್ವಾನಿಸಲಾಗಿತ್ತು.

‘‘ಅದನ್ನು ಅತ್ಯಂತ ಜತನದಿಂದ ಸಂರಕ್ಷಿಸಿಡಲಾಗಿದೆ. ಅದು ಅತ್ಯುನ್ನತ ದರ್ಜೆಯ ಪುರೋಹಿತರೊಬ್ಬರಿಗೆ ಸೇರಿದೆ. ಅದು 4,400 ವರ್ಷಗಳಿಗಿಂತಲೂ ಹಿಂದಿನದು’’ ಎಂದು ಅವರು ತಿಳಿಸಿದರು.

ಈ ಗೋರಿಯು ‘ವಾಹ್‌ಟ್ಯೆ’ ಎಂಬ ಅತ್ಯುನ್ನತ ಪುರೋಹಿತನದು. ಆ ವ್ಯಕ್ತಿಯು ದೊರೆ ನೆಫರಿರ್ಕರೆಯ ಆಳ್ವಿಕೆಯಲ್ಲಿ ಸೇವೆ ಸಲ್ಲಿಸಿದ್ದರು ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News