ಕೋಟ: ಯುವತಿ ನಾಪತ್ತೆ

Update: 2018-12-15 16:37 GMT

ಕೋಟ, ಡಿ.15: ಹಳ್ಳಾಡಿ ಹರ್ಕಾಡಿ ಗ್ರಾಮದ ಹಳ್ಳಾಡಿ ಮದಗ ಸಮೀಪದ ನಿವಾಸಿ ಶಿಲ್ಪಾ(21) ಎಂಬವರು ಡಿ.13ರಂದು ಮಂದರ್ತಿ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವಳು ಈವರೆಗೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ.

ಬಿಕಾಂ ಮುಗಿಸಿದ ಬಳಿಕ ಮನೆಯಲ್ಲಿಯೇ ಇದ್ದ ಶಿಲ್ಪಾಗೆ ಭರತ್ ಎಂಬಾತನ ಜೊತೆ ಪರಿಚಯವಾಗಿ ಆತನೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಳು. ಈ ಬಗ್ಗೆ ಆತನನ್ನು ಮನೆಗೆ ಕರಸಿ ತನ್ನ ತಂಗಿಯ ಸ್ನೇಹ ಮಾಡಬಾರದಾಗಿ ಎರಡು ತಿಂಗಳ ಹಿಂದೆ ಸೂಕ್ತ ತಿಳುವಳಿಕೆ ನೀಡಿದ್ದರು. ಆದರೂ ಕೂಡ ಮನೆಯವರಿಗೆ ತಿಳಿಯದಂತೆ ಅವರಿಬ್ಬರು ಮಾತುಕತೆ ನಡೆಸುತ್ತಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News