ಪ್ರತಿನಿತ್ಯ ಮಕ್ಕಳೊಂದಿಗೆ ಸಮಯ ವ್ಯಯಿಸಿ: ಡಾ.ವಿರೂಪಾಕ್ಷ ದೇವರಮನೆ

Update: 2018-12-15 17:26 GMT

ಮಂಗಳೂರು, ಡಿ.15: ಪೋಷಕರು ಮಕ್ಕಳೊಂದಿಗೆ ಕಳೆಯುತ್ತಿರುವ ಸಮಯ ಕನಿಷ್ಠ ಹಂತಕ್ಕೆ ತಲುಪಿದೆ. ಇದರಿಂದಾಗಿ ಮಕ್ಕಳು ತಾವು ಬೆಳೆಯುವ ಹಂತದಲ್ಲಿ ಹಲವಾರು ವಿಷಯಗಳಿಂದ ವಂಚಿತರಾಗುತ್ತಾರೆ. ಮುಂದಿನ ಅನಾಹುತ ತಪ್ಪಿಸಲು ಪ್ರತಿನಿತ್ಯ ಮಕ್ಕಳೊಂದಿಗೆ ಸಮಯ ವ್ಯಯಿಸಬೇಕು ಎಂದು ಮನೋವೈದ್ಯ ಹಾಗೂ ಆಪ್ತ ಸಲಹೆಗಾರ ಉಡುಪಿಯ ಡಾ. ಎ.ವಿ ಬಾಳಿಗಾ ಆಸ್ಪತ್ರೆಯ ಡಾ. ವಿರೂಪಾಕ್ಷ ದೇವರ ಮನೆ ಸಲಹೆ ನೀಡಿದರು.

ನಗರದ ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪಿಯು ಕಾಲೇಜಿನ ವಿದ್ಯಾರ್ಥಿಗಳ ಪೋಷಕರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಅಂಕಗಳಾಗಲಿ, ಸ್ಪರ್ಧೆಗಳಾಗಲಿ ಮಕ್ಕಳ ಮೇಲೆ ಯಾವುದೇ ಒತ್ತಡ ಹೇರಬಾರದು. ಇದರಿಂದ ಮಕ್ಕಳ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತದೆ. ಅವರ ಬೌದ್ಧಿಕ ಬೆಳವಣಿಗೆಗೆ ಕುಂಠಿತಗೊಳ್ಳುವ ಸಾಧ್ಯತೆಯೂ ಇರುತ್ತದೆ. ಮಕ್ಕಳೊಂದಿಗೆ ಸದಾ ಸ್ನೇಹಿತರಾಗಿಯೇ ಇರಬೇಕು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ.ನಾಕ್, ಆಡಳಿತ ಮಂಡಳಿಯ ಟ್ರಸ್ಟಿ ಡಾ. ಮುರಳೀಧರ ನಾಕ್, ಶಾಲಾ ಪ್ರಾಚಾರ್ಯೆ ವಿದ್ಯಾ ಕಾಮತ್, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ನಸೀಮಾಬಾನು, ಪ್ರಧಾನ ಸಲಹೆಗಾರ ರಮೇಶ್ ಕೆ. ಉಪಸ್ಥಿತರಿದ್ದರು.

ಪಿಯು ಕಾಲೇಜಿನ ಪ್ರಾಚಾರ್ಯರ ಪ್ರಭಾಕರ ಜಿ.ಎಸ್. ಸ್ವಾಗತಿಸಿದರು. ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಅತಿಥಿಗಳನ್ನು ಪರಿಚಯಿಸಿದರು. ಪ್ರಾಧ್ಯಾಪಕಿ ನಯನಾ ಪ್ರಸಾದ್ ವಂದಿಸಿದರು. ಶಿಲ್ಪಾ ಪಿ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News