ಬಂಟ್ವಾಳ: ಗ್ರಾಮಾಂತರ, ನಗರ ರಿಕ್ಷಾ ಚಾಲಕರ ಬಾಡಿಗೆ ವಿಚಾರದಲ್ಲಿ ಸಂಘರ್ಷ; ಪರಿಹಾರಕ್ಕಾಗಿ ಸಭೆ

Update: 2018-12-16 05:27 GMT

ಬಂಟ್ವಾಳ, ಡಿ. 16: ಬಂಟ್ವಾಳ ತಾಲೂಕಿನ ಗ್ರಾಮಾಂತರ ಮತ್ತು ನಗರ (ಪರ್ಮಿಟ್ ಇರುವ) ಆಟೋ ರಿಕ್ಷಾ ಚಾಲಕರ ನಡುವೆ ಬಾಡಿಗೆ ವಿಚಾರದಲ್ಲಿ ದಿನನಿತ್ಯ ಸಂಘರ್ಷ ನಡೆಯುತ್ತಿದ್ದು ಈ ಬಗ್ಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ತಾಲೂಕಿನ ಗ್ರಾಮಾಂತರ ರಿಕ್ಷಾ ಚಾಲಕರ ಸಭೆ ಬಿಸಿರೋಡ್ ವೃತ್ತ ಸಮೀಪವಿರುವ ರಿಕ್ಷ ಭವನದಲ್ಲಿ ನಡೆಯಿತು.

ಈ ಬಗ್ಗೆ ಗ್ರಾಮಾಂತರ ರಿಕ್ಷಾ  ಚಾಲಕರ ಸಮಸ್ಯೆ ಪರಿಹಾರಕ್ಕಾಗಿ ಗ್ರಾಮಾಂತರ ರಿಕ್ಷಾ ಚಾಲಕ ಮಾಲಕರ ಸಂಘವನ್ನು ಸ್ಥಾಪಿಸಲಾಗಿದೆ ಎಂದು ಕಾರ್ಯ ಕ್ರಮ ಆಯೋಜಿಸಿದ ರಿಕ್ಷಾ ಚಾಲಕರಾದ ರಫೀಕ್ ಹೇಳಿದ್ದಾರೆ. ಸುಮಾರು 150 ಚಾಲಕರು ಒಟ್ಟು ಸೇರಿದ ಈ ಸಭೆಯಲ್ಲಿ 23 ಮಂದಿಯ ಸಮಿತಿಯನ್ನು ಮಾಡಿ ಒಂಬತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ರಫೀಕ್, ಉಪಾಧ್ಯಕ್ಷರಾಗಿ ಪ್ರವೀಣ್, ಗೌರವಾಧ್ಯಕ್ಷರಾಗಿ ಅಬೂಬಕ್ಕರ್, ಪ್ರ ಕಾರ್ಯದರ್ಶಿಯಾಗಿ ನೌಫಲ್, ಜೊತೆ ಕಾರ್ಯದರ್ಶಿಯಾಗಿ ಇಬ್ರಾಹಿಮ್, ಸಂಘಟನಾ ಕಾರ್ಯದರ್ಶಿಯಾಗಿ ಹೈದರ್, ಕೊಶಾಧಿಕಾರಿ ಮೋಹನ್, ಲೆಕ್ಕ ಪರಿಶೋಧಕರಾಗಿ ಶ್ರೀಕಾಂತ್ ಹಾಗೂ ಸಮಿತಿ ಸದಸ್ಯರಾಗಿ ಸಾಧಿಕ್, ನಾಸಿರ್, ಕಾಸಿಮ್, ಸಿದ್ದೀಕ್, ಉದಯ, ಶಿವಕುಮಾರ್, ಸಮೀವುಲ್ಲಾ, ಶಾಫಿ, ಜಬ್ಬಾರ್, ರಫೀಕ್, ಆಸಿಫ್, ರಹಮತ್, ವಾಸಿಮ್, ಸಲೀಮ್, ಸಮೀರ್, ಇದ್ದಿನಬ್ಬ, ದಿವ್ಯಾನಂದ, ನವಾಝ್, ಇಲ್ಯಾಸ್, ರಿಝ್ವಾನ್, ಅನ್ಸಾರ್, ಮುನೀರ್, ಸಿದ್ದೀಕ್, ಫಝಲ್ ರವರನ್ನು ಆಯ್ಕೆ ಮಾಡಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಪುರಸಭಾ ಸದಸ್ಯ ಜನಾರ್ದನ ಭಾಗವಹಿಸಿದರು. ನಾಸಿರ್ ಸ್ವಾಗತಿಸಿ, ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News