ಭವಾನಿ ಫೌಂಡೇಶನ್‌ಗೆ ರಾಷ್ಟ್ರೀಯ ಉದ್ಯೋಗ ಪ್ರಶಸ್ತಿ

Update: 2018-12-16 14:30 GMT

ಮಂಗಳೂರು, ಡಿ.16: ಭವಾನಿ ಶಿಪ್ಟಿಂಗ್ ಸರ್ವಿಸಸ್ ಸಂಸ್ಥೆಯ ಮೂಲಕ ಉದ್ಯಮ ನಡೆಸುತ್ತಿರುವ ಕೆ.ಡಿ. ಶೆಟ್ಟಿ ತನ್ನ ತಾಯಿಯ ಹೆಸರಿನಲ್ಲಿ ಸ್ಥಾಪಿಸಿರುವ ಸಮಾಜ ಸೇವಾ ಸಂಸ್ಥೆ ಭವಾನಿ ಫೌಂಡೇಶನ್‌ಗೆ ಹೊಸದಿಲ್ಲಿಯ ನ್ಯಾಷನಲ್ ಎಚುವರ್ಸ್‌ ರೆಕೋಗ್ನಿಷನ್ ಫೋರಂ ಸಂಸ್ಥೆಯ ವಾರ್ಷಿಕ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿದೆ.

ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭವಾನಿ ಶಿಪ್ಟಿಂಗ್ ಸರ್ವಿಸಸ್ ಇಂಡಿಯಾ ಫೈ.ಲಿ.ನ ಮಹಾಪ್ರಬಂಧಕ ಮನೋಜ್ ಶುಕ್ಲ ಪ್ರಶಸ್ತಿಯನ್ನು ಸ್ವೀಕರಿಸಿದರು.

ಕಳೆದ ನಾಲ್ಕು ವರ್ಷಗಳಲ್ಲಿ ಭವಾನಿ ಫೌಂಡೇಶನ್ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಇನ್ನಿತರ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಅಪಾರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ. ಭವಾನಿ ಫೌಂಡೇಶನ್ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಆದಿವಾಸಿ ಜನಾಂಗವಿರುವ ಪ್ರದೇಶಗಳಾದ ಖಾಲಾಪುರ, ಬಿಲ್‌ವಾಲೆ, ಠಾಕೂರ್ ವಾಡಿ, ಪಿರ್ಕಟ್‌ವಾಡಿ ಹಾಗೂ ಬಿಲ್‌ವಾಲೆ ಜಿಲ್ಲಾ ಪರಿಷತ್‌ಆದಿವಾಸಿ ಪ್ರಾಥಮಿಕ ಶಾಲೆಗಳ ಕಟ್ಟಡಗಳನ್ನು ದುರಸ್ಥಿಗೈದು ನೂರಾರು ಮಕ್ಕಳ ಬಾಳಿಗೆ ಬೆಳಕು ನೀಡಿದೆ. ಅಲ್ಲದೆ ಆದಿವಾಸಿ ಜನಾಂಗದವರಿಗಾಗಿ ಸಭಾಂಗಣವೊಂದನ್ನು ನಿರ್ಮಿಸಿದ್ದು, ಲೋಕಾರ್ಪಣೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಭವಾನಿ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕ ಕೆ.ಡಿ. ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News