ನಾಸಿಕ್‌ನಲ್ಲಿ ರೈತನ ಆತ್ಮಹತ್ಯೆ

Update: 2018-12-16 15:50 GMT

ನಾಸಿಕ್,ಡಿ.16: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮೌಜೆ-ವಜೀರಖೇಡೆ ಗ್ರಾಮದಲ್ಲಿ ಸಾಲದ ಶೂಲದಲ್ಲಿ ಸಿಲುಕಿದ್ದ ರೈತನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರೊಂದಿಗೆ ಹಾಲಿ ವರ್ಷದಲ್ಲಿ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 108ಕ್ಕೇರಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ರೈತ ನಿಲೇಶ ಧರ್ಮರಾಜ ಹ್ಯಾಲಿಜ್(28) ನಾಲ್ಕು ಲ.ರೂ.ಗಳ ಸಾಲವನ್ನು ಹೊಂದಿದ್ದ ಎಂದು ತಹಶೀಲ್ದಾರ್ ಜ್ಯೋತಿ ದೇವರೆ ತಿಳಿಸಿದರು.

ಡಿ.12ರಂದು ಜಿಲ್ಲೆಯ ನಂದಗಾಂವ್ ತಾಲೂಕಿನಲ್ಲಿ ಸಾಲದ ಹೊರೆಯನ್ನು ಹೊತ್ತಿದ್ದ ಕೃಷಿಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದ. ಜಿಲ್ಲೆಯಲ್ಲಿ ನವೆಂಬರ್‌ನಲ್ಲಿ 15 ಮತ್ತು ಡಿಸೆಂಬರ್‌ನಲ್ಲಿ 9 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲಬಾಕಿ,ಮಳೆಯ ಕೊರತೆ ಮತ್ತು ಬೆಳೆಹಾನಿ ಇತ್ಯಾದಿಗಳು ಈ ಆತ್ಮಹತ್ಯೆಗಳಿಗೆ ಕಾರಣಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News