8 ಲಕ್ಷ ರೂ. ಲಂಚಕ್ಕೆ ಬೇಡಿಕೆ: ಐಟಿ ಅಧಿಕಾರಿ ವಿರುದ್ಧ ಪ್ರಕರಣ ದಾಖಲು

Update: 2018-12-16 15:55 GMT

ಅಹ್ಮದಾಬಾದ್, ಡಿ.16: ವ್ಯಕ್ತಿಯೋರ್ವನ ಆದಾಯ ತೆರಿಗೆ ಮೌಲ್ಯಮಾಪನ ನಡೆಸದಿರಲು ಎಂಟು ಲ.ರೂ.ಗಳ ಬೇಡಿಕೆಯನ್ನಿರಿಸಿದ್ದ ಹಿರಿಯ ಆದಾಯ ತೆರಿಗೆ ಅಧಿಕಾರಿಯೋರ್ವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಘಟಕ(ಎಸಿಬಿ)ವು ಪ್ರಕರಣವನ್ನು ದಾಖಲಿಸಿಕೊಂಡಿದೆ.

ಇಲ್ಲಿಯ ಆದಾಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿರುವ ಎಸ್.ಸಿ.ಮೀನಾ ಅವರು ಇಬ್ಬರು ಚಾರ್ಟರ್ಡ್ ಅಕೌಂಟಂಟ್(ಸಿಎ)ಗಳು ಮತ್ತು ಕಿರಿಯ ಐಟಿ ಅಧಿಕಾರಿಯ ಮೂಲಕ ಲಂಚಕ್ಕಾಗಿ ಬೇಡಿಕೆಯನ್ನಿರಿಸಿದ್ದರು ಎಂದು ಎಸಿಬಿ ತಿಳಿಸಿದೆ.

ವ್ಯಕ್ತಿಯ ದೂರನ್ನು ದಾಖಲಿಸಿಕೊಂಡಿದ್ದ ಎಸಿಬಿ ಶನಿವಾರ ಬಲೆಯನ್ನು ಹೆಣೆದಿದ್ದು,ಸಿಎ ನಮಿತಾಬೆನ್ ಸಿಂಘಾನಿಯಾ ಎಂಟು ಲ.ರೂ.ಗಳ ಲಂಚವನ್ನು ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದೆ.

ದೂರುದಾರನ ಪ್ರಕರಣನ್ನು ಬಗೆಹರಿಸಲು ಮೀನಾರನ್ನು ಕೇಳಿಕೊಳ್ಳಲು 50,000 ರೂ.ಗಳ ಲಂಚ ನೀಡುವಂತೆ ಐಟಿ ಇಲಾಖೆಯ ಉದ್ಯೋಗಿ ಸುನಿಲ್ ಪಟ್ನಿ ಎಂಬಾತನೂ ಆಗ್ರಹಿಸಿದ್ದ. ಮೀನಾ,ಪಟ್ನಿ,ಸಿಂಘಾನಿಯಾ ಮತ್ತು ಆಕೆಯ ಸಿಎ ಪತಿಯ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಎಸಿಬಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News