ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಉರ್ದು ಭಾಷಣದಲ್ಲಿ ಖುಬೈಬ್ ಆಹ್ಮದ್ ಅಕ್ರಮಿ ದ್ವಿತೀಯಾ

Update: 2018-12-16 16:30 GMT

ಭಟ್ಕಳ, ಡಿ. 16: ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಟ್ಕಳದ ಇಸ್ಲಾಮಿ ಆಂಗ್ಲೋ ಉರ್ದು ಪ್ರೌಢಶಾಲೆ ವಿದ್ಯಾರ್ಥಿ ಖುಬೈಬ್ ಆಹ್ಮದ್ ಅಕ್ರಮಿ ದ್ವಿತೀಯಾ ಸ್ಥಾನ ಪಡೆದ್ದಾನೆ.

ಇಲ್ಲಿನ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ನ ಪ್ರಧಾನ ಖಾಝಿಯಾಗಿರುವ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ನದ್ವಿ ಯವರ ಪುತ್ರನಾಗಿರುವ ಖುಬೈಬ್ ಶಾಲಾ ಹಂತದಿಂದ ವಲಯ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ರಾಜ್ಯಮಟ್ಟದ ಉರ್ದು ಭಾಷಣ ಸ್ಪರ್ಧೆಗೆ ಆಯ್ಕೆಗೊಂಡಿದ್ದನು.

ರಾಜ್ಯದ 34 ಜಿಲ್ಲೆಗಳಿಂದ 68 ವಿದ್ಯಾರ್ಥಿಗಳು ಉರ್ದು ಭಾಷಣ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದರು. ಆ ಎಲ್ಲ ವಿದ್ಯಾರ್ಥಿಗಳನ್ನು ಹಿಂದಿಕ್ಕಿ ರಾಜ್ಯಕ್ಕೆ ದ್ವಿತೀಯಾ ಸ್ಥಾನ ಪಡೆಯುವುದರ ಮೂಲಕ ಭಟ್ಕಳ ತಾಲೂಕು ಹಾಗೂ ಉತ್ತರಕನ್ನಡ ಜಿಲ್ಲೆಯ ಹೆಸರನ್ನು ರಾಜ್ಯಮಟ್ಟದಲ್ಲಿ ಪಸರಿಸಲು ಕಾರಣನಾಗಿದ್ದಾನೆ. 

ವಿದ್ಯಾರ್ಥಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ ಸೇರಿದಂತೆ ಶಿಕ್ಷಕ ವರ್ಗ ಅಭಿನಂದಿಸಿದೆ. 

ಶಂಸುಲ್ ಉಲಮಾ ಸ್ಮಾರಕ ಇಸ್ಲಾಮಿಕ್ ಸೆಂಟರ್ ಜಾಮಿಅಃ ಯಮಾನಿಯ್ಶ ಅರೇಬಿಕ್ ಕಾಲೇಜ್ ಕುಟ್ಟಿಕಟ್ಟೂರ್ ಕಲ್ಲಿಕೋಟೆ ಇದರ 19 ನೇ ವಾರ್ಷಿಕ ಹಾಗೂ 6 ನೇ ಸನದುಧಾನ ಮಹಾ ಸಮ್ಮೇಳನವು ಸಮಸ್ತ ಕೇರಳ ಜಂಇಯ್ಶತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಆಲಿಕುಟ್ಟಿ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಮ್ಮೇಳನವನ್ನು ಪಾಣ್ಣಕ್ಕಾಡ್ ಹೈದರಾಲಿ ಶಿಹಾಬ್ ತಂಙಳ್ ಉದ್ಘಾಟಿಸಿದರು. ಸನದುಧಾನ ಪ್ರಭಾಷಣ ವನ್ನು ಸಮಸ್ತ ಕೇರಳ ಜಂಇಯ್ಶತುಲ್ ಉಲಮಾ ಅಧ್ಯಕ್ಷರೂ ಕಾಲೇಜಿನ ಪ್ರಾಶುಂಪಾಲರಾದ ಶೈಖುನಾ ಸೈಯ್ಶದುಲ್ ಉಲಮಾ ಜಿಫ್ರೀ ಮುತ್ತುಕೋಯ ತಂಙಳ್ ಮಾಡಿದರು. ವೇದಿಕೆಯಲ್ಲಿ ಶೈಖುನಾ ಕೊಯ್ಶೊಡ್ ಉಮ್ಮರ್ ಮುಸ್ಲೀಯಾರ್, ಮಾಣಿಯೂರ್ ಅಹಮದ್ ಮುಸ್ಲೀಯಾರ್, ಅಬ್ದುಲ್ ಹಮೀದ್ ಪೈಝಿ ಅಂಬಲಕಡವ್, ಸತ್ತಾರ್ ಪಂದಲೂರ್, ನಝೀಮುದ್ದೀನ್ ಪೋಕೋಯ ತಂಙಳ್ ಅಲ್ ಯಮಾನಿ, ವಳವಣ್ಣ ಅಬೂಬಕರ್ ದಾರಿಮಿ, ಗಪೂರ್ ದಾರಿಮಿ, ಸಲೀಂ ದಾರಿಮಿ, ಮುಂತಾದವರು ಭಾಗವಹಿಸಿದರು.

ಕುಟ್ಟಿ ಹಸನ್ ದಾರಿಮಿ ಸ್ವಾಗತಿಸಿ, ಅಬೂಬಕರ್ ದಾರಿಮಿ ವಂದಿಸಿದರು. ಮಿರ್ಷಾದ್ ಯಮಾನಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News