ಮಾಲ್ದೀವ್ಸ್: .ಯಾಮೀನ್ ಬ್ಯಾಂಕ್ ಖಾತೆಯಲ್ಲಿರುವ 6.5 ಮಿಲಿಯ ಡಾ. ಮುಟ್ಟುಗೋಲಿಗೆ ಕೋರ್ಟ್ ಆದೇಶ

Update: 2018-12-16 17:13 GMT

ಮಾಲೆ, ಡಿ.15: ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ತನಿಖೆ ಎದುರಿಸುತ್ತಿರುವ ಮಾಲ್ದೀವ್ಸ್‌ನ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಅವರ ಬ್ಯಾಂಕ್ ಖಾತೆಯಲ್ಲಿರುವ 6.5 ಮಿಲಿಯ ಡಾಲರ್ (46.74 ಕೋಟಿ ರೂ.) ಹಣವನ್ನು ಮುಟ್ಟುಗೋಲು ಹಾಕುವಂತೆ ಸ್ಥಳೀಯ ನ್ಯಾಯಾಲಯ ಆದೇಶಿಸಿದೆ.

 ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಯಾಮೀನ್ ಅವರನ್ನು ‘ಹನಿಮೂನ್’ ದ್ವೀಪದಲ್ಲಿ ಮಾಲ್ದೀವ್ಸ್ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

 ಮಾಲ್ದೀವ್ಸ್‌ನಲ್ಲಿ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಯಾಮೀನ್ ಅವರು ಅಕ್ರಮವಾಗಿ 6.5 ಮಿಲಿಯ ಡಾಲರ್ ಹಣವನ್ನು ಸ್ವೀಕರಿಸಿದ್ದಾರೆಂಬ ಆರೋಪವನ್ನು ಎದುರಿಸುತ್ತಿದ್ದಾರೆ. ಯಾಮೀನ್ ಅವರ ವೈಯಕ್ತಿಕ ಖಾತೆಗೆ ಭಾರೀ ಮೊತ್ತದ ಈ ಹಣವನ್ನು ಎರಡು ಕಂತುಗಳಲ್ಲಿ ಶಂಕಾಸ್ಪದವಾಗಿ ಪಾವತಿಸಲಾಗಿತ್ತೆಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News