ಮುಸ್ಲಿಮ್ ವಿರೋಧಿ ಪೋಸ್ಟ್: ಇಸ್ರೇಲ್ ಪ್ರಧಾನಿಯ ಪುತ್ರನ ಖಾತೆಯನ್ನು ಬ್ಲಾಕ್ ಮಾಡಿದ ಫೇಸ್ ಬುಕ್

Update: 2018-12-17 10:35 GMT

ಜೆರುಸಲೆಂ, ಡಿ.17: “ಎಲ್ಲಾ ಮುಸ್ಲಿಮರೂ ಇಸ್ರೇಲ್ ದೇಶವನ್ನು ತೊರೆಯಬೇಕು” ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪುತ್ರ ಯೈರ್ ನೆತನ್ಯಾಹು ಅವರ ಫೇಜನ್ನು ಫೇಸ್ ಬುಕ್ 24 ಗಂಟೆಗಳ ಕಾಲ ಬ್ಲಾಕ್ ಮಾಡಿದೆ.

ಇತ್ತೀಚಿಗಿನ ದಿನಗಳಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಇಬ್ಬರು ಸೈನಿಕರೂ ಸೇರಿದಂತೆ ಐವರು ಫೆಲೆಸ್ತೀನಿಯರು ಹಾಗೂ ಮೂವರು ಇಸ್ರೇಲಿಗಳು ಸಾವಿಗೀಡಾದ ನಂತರ ಯೈರ್ ಅವರು ಇಸ್ರೇಲಿನಿಂದ ಎಲ್ಲಾ ಫೆಲೆಸ್ತೀನೀಯರನ್ನು ಹೊರಗಟ್ಟಬೇಕೆಂದು ಕರೆ ನೀಡಿದ್ದರು.

“ದಾಳಿಗಳು ಎಲ್ಲಿ ಆಗುವುದಿಲ್ಲವೆಂದು ನಿಮಗೆ ಗೊತ್ತೇನು ? ಜಪಾನ್ ಮತ್ತು ಐಸ್‍ಲ್ಯಾಂಡಿನಲ್ಲಿ, ಕಾಕತಾಳೀಯವಾಗಿ ಅಲ್ಲಿ ಮುಸ್ಲಿಮರಿಲ್ಲ'' ಎಂದು ಪ್ರಧಾನಿಯ ಪುತ್ರನ ಒಂದು ಪೋಸ್ಟ್ ಹೇಳಿತ್ತು.

ಇನ್ನೊಂದು ಪೋಸ್ಟ್ ನಲ್ಲಿ `ಶಾಂತಿಗಾಗಿ ಕೇವಲ ಎರಡು ಸಾಧ್ಯತೆಗಳಿವೆ, ಒಂದೋ ಎಲ್ಲಾ ಯಹೂದಿಗಳು ಇಸ್ರೇಲ್ ತೊರೆಯಬೇಕು, ಇಲ್ಲವೇ ಎಲ್ಲಾ ಮುಸ್ಲಿಮರು ತೊರೆಯಬೇಕು, ನಾನು ಎರಡನೇ ಆಯ್ಕೆಯನ್ನು ಇಚ್ಛಿಸುತ್ತೇನೆ'' ಎಂದು 27 ವರ್ಷದ ಯೈರ್ ಬರೆದಿದ್ದಾರೆ.

ಬೆಳೆದು ನಿಂತ ಯುವಕನಾದರೂ ಪ್ರಧಾನಿಯ ಅಧಿಕೃತ ನಿವಾಸದಲ್ಲಿ ಯಾವುದೇ ಅಧಿಕೃತ ಹುದ್ದೆಯಿಲ್ಲದೆ ಅಂಗರಕ್ಷಕರು, ಚಾಲಕರು ಮತ್ತಿತರ ಸವಲತ್ತುಗಳನ್ನು ಪಡೆಯುತ್ತಿದ್ದಾರೆಂದು ಯೈರ್ ಈಗಾಗಲೇ ಸಾಕಷ್ಟು ಟೀಕೆಗೊಳಗಾಗಿದ್ದಾರೆ. ಎರಡು ಇಸ್ರೇಲಿ ಸೈನಿಕರ ಸಾವಿಗೆ ಪ್ರತೀಕಾರ ತೀರಿಸಲು ಕರೆ ನೀಡಿದ್ದ ಯೈರ್ ಅವರ ಪೋಸ್ಟ್ ಗಳನ್ನು ಫೇಸ್ ಬುಕ್ ಡಿಲೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News