×
Ad

ಟಿಪ್ಪುಜಯಂತಿಗೆ ಹೋಗದಂತೆ ತಡೆದಿದ್ದ ದೇವರೇ ಪ್ರಮೋದ್‌ರನ್ನು ಚುನಾವಣೆಯಲ್ಲಿ ಸೋಲಿಸಿದ್ದಾರೆ: ಅನ್ಸಾರ್ ಅಹ್ಮದ್

Update: 2018-12-17 17:44 IST

ಉಡುಪಿ, ಡಿ.18: ಟಿಪ್ಪುಜಯಂತಿ ಕಾರ್ಯಕ್ರಮಕ್ಕೆ ಹೋಗದಂತೆ ತಡೆದಿದ್ದ ದೇವರೇ ಸಮಯ ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ಉಡುಪಿ ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ರನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಟೀಕಿಸಿದ್ದಾರೆ.

ತಾನು ಹೊರ ಜಗತ್ತಿಗೆ ತೋರುವ ವ್ಯಕ್ತಿತ್ವವೇ ಬೇರೆ ಹಾಗೂ ತನ್ನೊಳಗಿರುವ ವ್ಯಕ್ತಿತ್ವವೇ ಬೇರೆ ಎಂಬುದನ್ನು ಪ್ರಮೋದ್ ಸಾಬೀತುಪಡಿಸಿ ದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು ಬಿಜೆಪಿ ಪಕ್ಷದ ಕೆಲವು ವಿಚಾರಧಾರೆಯನ್ನು ಅವರು ಹೊಂದಿದ್ದಾರೆ. ಇವರು ಮರಳಿನ ವಿಚಾರದಲ್ಲಿ ಬಡವರ ಪರವಾಗಿ ನಿಲ್ಲುತ್ತಿದ್ದರೆ ಖಂಡಿತವಾಗಿಯೂ ಬಡವರು ನಂಬಿದ ದೇವರ ದಯೆಯಿಂದ ಚುನಾವಣೆಯಲ್ಲಿ ಗೆಲ್ಲುತ್ತಿದ್ದರು ಎಂದು ಅನ್ಸಾರ್ ಅಹ್ಮದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News