×
Ad

ಅವಿಭಜಿತ ದ.ಕ.ಜಿಲ್ಲಾ ಸ್ಥಳೀಯ ಸಂಸ್ಥೆ ಕ್ರೀಡಾ-ಸಾಂಸ್ಕೃತಿಕ ಸ್ಪರ್ಧೆ

Update: 2018-12-17 19:39 IST

ಕೋಟ, ಡಿ.17: ಅವಿಭಜಿತ ದ.ಕ.ಜಿಲ್ಲೆಯ ಪಂಚಾಯತ್‌ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆ ‘ಹೊಳಪು- 2018’ರಲ್ಲಿ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಪಂ ಹಾಗೂ ಉಡುಪಿ ತಾಪಂಗಳು ಚಾಂಪಿಯನ್ ತಂಡಗಳಾಗಿ ಮೂಡಿ ಬಂದವು.

ಕ್ರೀಡಾಕೂಟದಲ್ಲಿ ಪಥ ಸಂಚಲನದಲ್ಲಿ ವಡ್ಡರ್ಸೆ ಗ್ರಾಪಂ ಪ್ರಥಮ, ಕುತ್ಯಾರು ಗ್ರಾಪಂ ದ್ವಿತೀಯ ಹಾಗೂ ಕೋಟ ಗ್ರಾಪಂ ತೃತೀಯ ಸ್ಥಾನಗಳನ್ನು ಪಡೆದುಕೊಂಡವು.

ಕ್ರೀಡಾಕೂಟದಲ್ಲಿ ಪಥ ಸಂಚಲನದಲ್ಲಿ ವಡ್ಡರ್ಸೆ ಗ್ರಾಪಂ ಪ್ರಥಮ, ಕುತ್ಯಾರು ಗ್ರಾಪಂ ದ್ವಿತೀಯ ಹಾಗೂ ಕೋಟ ಗ್ರಾಪಂ ತೃತೀಯ ಸ್ಥಾನಗಳನ್ನು ಪಡೆದುಕೊಂಡವು. ಪುರುಷರ 100 ಮೀ. ಓಟದಲ್ಲಿ ಬೆಳ್ತಂಗಡಿ ಬಾರ್ಯ ಗ್ರಾಪಂನ ದರ್ಣಪ್ಪಗೌಡ ಪ್ರಥಮಿಗರಾಗಿ ಗುರಿಮುಟ್ಟಿದರು. ಚಿತ್ತೂರಿನ ಚಂದ್ರಶೇಖರ ಶೆಟ್ಟಿ ದ್ವಿತೀಯ ಹಾಗೂ ಬೆಳ್ತಂಗಡಿ ತಣ್ಣೀರುಪಂತದ ಸುಂದರ್ ನಾಯ್ಕ ತೃತೀಯ ಸ್ಥಾನ ಪಡೆದುಕೊಂಡರು. ಜೂನಿಯರ್ ವಿಭಾಗದಲ್ಲಿ ಕೆರ್ಗಾಲ್ ಗ್ರಾಪಂನ ರಾಘವೇಂದ್ರ ಪ್ರಥಮ ಸ್ಥಾನ ಪಡೆದರು. ಮಹಿಳೆಯರ 100 ಮೀ ಓಟ ದಲ್ಲಿ ಮೇಲಂತಬೆಟ್ಟು ಗ್ರಾಪಂನ ನೀತ ಮಹೇಶ್ ಮೊದಲಿಗರಾದರು.

ಮಹಿಳೆಯರ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಮಂಗಳೂರು ಎಕ್ಕಾರು ಗ್ರಾಪಂನ ಸುರೇಖಾ ರೈ, ಪುರುಷರ ವಿಭಾಗದಲ್ಲಿ ಬಿಜೂರು ಗ್ರಾಪಂನ ಜಗದೀಶ್ ದೇವಾಡಿಗ ಪ್ರಥಮ ಸ್ಥಾನ ಪಡೆದರು.

ಮಹಿಳೆಯರ ಮಡಿಕೆ ಒಡೆಯುವ ರ್ಸ್ಪೆಯಲ್ಲಿಮಂಗಳೂರುಎಕ್ಕಾರುಗ್ರಾಪಂನಸುರೇಖಾರೈ,ಪುರುಷರವಿಾಗದಲ್ಲಿ ಬಿಜೂರು ಗ್ರಾಪಂನ ಜಗದೀಶ್ ದೇವಾಡಿಗ ಪ್ರಥಮ ಸ್ಥಾನ ಪಡೆದರು. ಪುರುಷರ ವಿಭಾಗದ 9 ಜನರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ನರಿಕೊಂಬು ಗ್ರಾಪಂ ಹಾಗೂ ಉಪ್ಪಿನಂಗಡಿ ಗ್ರಾಪಂ ಮೊದಲೆರಡು ಸ್ಥಾನಗಳನ್ನು ಪಡೆದವು. 5 ಜನರ ಹಗ್ಗ ಜಗ್ಗಾಟದಲ್ಲಿ ಹಾರ್ದಳ್ಳಿ ಮಂಡಳ್ಳಿ ಗ್ರಾಪಂ ಮತ್ತು ಗುತ್ತಿಗಾರು ಸುಳ್ಯ ಗ್ರಾಪಂ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವು,

ಪುರುಷರ ವಿಭಾಗದ 9 ಜನರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ನರಿಕೊಂಬು ಗ್ರಾಪಂ ಹಾಗೂ ಉಪ್ಪಿನಂಗಡಿ ಗ್ರಾಪಂ ಮೊದಲೆರಡು ಸ್ಥಾನಗಳನ್ನು ಪಡೆದವು. 5 ಜನರ ಹಗ್ಗ ಜಗ್ಗಾಟದಲ್ಲಿ ಹಾರ್ದಳ್ಳಿ ಮಂಡಳ್ಳಿ ಗ್ರಾಪಂ ಮತ್ತು ಗುತ್ತಿಗಾರು ಸುಳ್ಯ ಗ್ರಾಪಂ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವು, ಮಹಿಳೆಯರ ವಿಭಾಗದ 9 ಜನರ ಹಗ್ಗ ಜಗ್ಗಾಟದಲ್ಲಿ ಉಡುಪಿ ತಾಪಂ ಪ್ರಥಮ, ಬೆಳ್ತಂಗಡಿ ತಾಪಂ ದ್ವಿತೀಯ ಸ್ಥಾನ ಪಡೆದವು, ತ್ರೋಬಾಲ್ ಸ್ಪರ್ಧೆ ಯಲ್ಲಿ ಕುಂದಾಪುರ ತಾಪಂ ಪ್ರಥಮ, ಉಳ್ಳಾಲ ಪುರಸಭೆ ದ್ವಿತೀಯ ಸ್ಥಾನ ಪಡೆದವು.

ಪುರುಷರ ಛದ್ಮವೇಷದಲ್ಲಿ ವಾರಂಬಳ್ಳಿ ಗ್ರಾಪಂನ ಗೋಪಾಲ ಪ್ರಥಮ, ಕೋಣಿ ಗ್ರಾಪಂನ ಪ್ರವೀಣ್‌ಕುಮಾರ್ ಶೆಟ್ಟಿ ದ್ವಿತೀಯ ಹಾಗೂ ಎಕ್ಕಾರು ಗ್ರಾಪಂನ ಸುದೀಪ್ ಆರ್ ಅಮೀನ್ ತೃತೀಯ ಬಹುಮಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಕೋಟ ಗ್ರಾಪಂನ ನಾಗರತ್ನ ಹೇರ್ಳೆ ಪ್ರಥಮ, ಯಡ್ತಾಡಿ ಗ್ರಾಪಂನ ಯಶಸ್ವಿನಿ ಹೆಗ್ಡೆ ದ್ವಿತೀಯ ಹಾಗೂ ಇಳಂತಿಲ ಗ್ರಾಪಂನ ಯಶೋಧ ಶೆಟ್ಟಿ ತೃತೀಯ ಸ್ಥಾನ ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News