×
Ad

ತೋಟಗಾರಿಕಾ ಬೆಳೆಗಳ ಹನಿ, ತುಂತುರು ನೀರಾವರಿ ಯೋಜನೆಗೆ ಸಹಾಯಧನ

Update: 2018-12-17 19:57 IST

ಮಂಗಳೂರು, ಡಿ.17: ತೋಟಗಾರಿಕಾ ಇಲಾಖೆಯಲ್ಲಿ 2018-19ನೆ ಸಾಲಿನಲ್ಲಿ ಕಾಫಿ, ಟೀ ತೋಟ ಹೊರತು ಪಡಿಸಿ ಉಳಿದ ತೋಟಗಾರಿಕಾ ಬೆಳೆಗಳಿಗೆ ನೀರಾವರಿ ಯೋಜನೆಗಾಗಿ ಹನಿ ಮತ್ತು ತುಂತುರ ನೀರಾವರಿ ಯೋಜನೆಗೆ 50ರಿಂದ ಶೇ 90ರಷ್ಟು ಸಬ್ಸಿಡಿ ದೊರೆಯಲಿದೆ ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರದೀಪ್ ಡಿ ಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ರೈತರು ಕೃಷಿಗಾಗಿ  ಶೇ. 50 ಸಬ್ಸಿಡಿ ಹಾಗೂ ಪಾಲಿಡ್ರೈಯರ್ ಅಳವಡಿಕೆಗಾಗಿ ಸಹಾಯಧನ ಲಭ್ಯವಿರುತ್ತದೆ ಎಂದು ಪ್ರದೀಪ್ ಡಿ ಸೋಜ ತಿಳಿಸಿದ್ದಾರೆ.

2019-20ರ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಅಡಿಕೆ ,ತೆಂಗು, ಕಾಳು ಮೆಣಸು, ಕೊಕೋ ಇತ್ಯಾದಿ ತೋಟಗಾರಿಕಾ ಬೆಳೆಗಳ ತೋಟಗಳನ್ನು ನಿರ್ಮಿಸಲು ಹಾಗೂ ಅಡಿಕೆಯಲ್ಲಿ ಎಡೆ ಸಸಿ ನಾಟಿ ಮಾಡುವ ಕಾಮಗಾರಿಗೆ ರೈತರು ಈಗಾಗಲೇ ಸಂಬಂಧಿಸಿದ ಗ್ರಾಮ ಪಂಚಾಯತ್‌ ಮತ್ತು ಇಲಾಖೆಯಲ್ಲಿ ನೋಂದಾಯಿಸಲು ಕೋರಲಾಗಿದೆ ಎಂದು ಪ್ರದೀಪ್ ಡಿ ಸೋಜ ತಿಳಿಸಿದ್ದಾರೆ. ಮಂಗಳೂರು ತಾಲೂಕಿನಲ್ಲಿ ಕೊಳೆ ರೋಗಕ್ಕೆ ಸುಮಾರು 4 ಕೋಟಿ 13 ಲಕ್ಷ ನಷ್ಟವಾಗಿದೆ ಪರಿಹಾರಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪ್ರದೀಪ್ ಡಿ ಸೋಜ ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಸಹಾಯಕ ತೋಟಗಾರಿಕಾ ಅಧಿಕಾರಿಗಳಾದ ಯೋಗೇಂದ್ರ ಮತ್ತು ಮಹೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News