ನಿಷ್ಕಳಂಕ ಸಮಾಜ ಸೇವೆಯ ನಿಷ್ಠಾವಂತ ರಾಜಕಾರಣಿ ಬಿ. ವಿಶ್ವನಾಥ್ :ವಾಸುದೇವ ಕಾಮತ್
ಮಂಗಳೂರು, ಡಿ. 17: ಬಿ ವಿಶ್ವನಾಥ್ ಅವರ ಸಾಧನಾ ಪಕ್ಷಿನೋಟದ ಕರ್ಮಯೋಗಿ ಪುಸ್ತಕ ಬಿಡುಗಡೆ, ಸನ್ಮಾನ ಮತ್ತು ವಿದ್ಯಾರ್ಥಿ ವೆತಾನಾ ವಿತರಣಾ ಸಮಾರಂಭವು ಭಾರತ್ ಸೋಶಿಯಲ್ ಆ್ಯಂಡ್ ವೆಲ್ಫೇರ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಪ್ರಗತಿನಗರದ ಕೇಂದ್ರ ಸಾರ್ವಜನಿಕ ಗ್ರಂಥಾಲಯದ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನಿರ್ವಹಿಸಿದ ಮಂಗಳೂರು ವಿಶ್ವ ವಿದ್ಯಾನಿಲಯದ ಅಧೀಕ್ಷಕ ಶ್ರೀ ಹರೀಶ್ ಕೆ ಮಾತನಾಡಿ "ಭ್ರಷ್ಟಾಚಾರದಲ್ಲಿ ತುಂಬಿದ ರಾಜಕೀಯ ಕ್ಷೇತ್ರದಲ್ಲಿ ಸತ್ಯಕ್ಕೆ ಬೆಲೆಯಿಲ್ಲ ನಿಷ್ಠಾವಂತ ರಾಜಕಾರಣಿಗಳನ್ನು ಇಂದು ಕಾಣಲು ಸಾಧ್ಯವಿಲ್ಲ ಆದರೆ ಸತ್ಯಕ್ಕೆ ಸಾಕ್ಷಿಯಾಗಿ ಜನ ಸೇವಕರಾಗಿ ವಿಶ್ವನಾಥ ನಂತವರು ಇಂದಿಗೂ ಈ ನಮ್ಮ ಮುಂದಿದ್ದಾರೆ" ಎಂದರು.
ನಂತರ ಬಿ ವಿಶ್ವನಾಥ್ ಅವರ ಸಾಧನಾ ಪಕ್ಷಿನೋಟದ "ಕರ್ಮಯೋಗಿ" ಪುಸ್ತಕ ಬಿಡುಗಡೆ ಗೊಳಿಸಿದ ಇನ್ನೋರ್ವ ಮುಖ್ಯ ಅತಿಥಿ ಶ್ರೀ ವಾಸುದೇವ ಕಾಮತ್ ಕೆ ನಂತರ ಮಾತನಾಡಿದರು.
ನಿವೃತ ಪೊಲೀಸ್ ಅಧಿಕಾರಿ ಮುಕುಂದ ನಾಯಕ್ ತಮ್ಮ ಅನಿಸಿಕೆ ಗಳನ್ನೂ ವ್ಯಕ್ತಪಡಿಸಿದರು. ನಂತರ ವಿಶ್ವನಾಥರನ್ನು ಸನ್ಮಾನಿಸಲಾಯಿತು.ಈ ಸಂದರ್ಭ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಭಾರತ್ ಸೋಶಿಯಲ್ ಆ್ಯಂಡ್ ವೆಲ್ಫೇರ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷ ನೂರುಲ್ ಅಮೀನ್ ಕೆಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅಕೀಫ್, ಎಂಸಿ ಅಶ್ರಫ್, ಕರೀಂ ಕೆಪಿ, ಅಬ್ದುಲ್ಲಾ, ಇಕ್ವಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಹುಸೈನ್ ಕಾಟಿಪಳ್ಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.