ಫೆಲೆಸ್ತೀನ್ ವ್ಯಕ್ತಿಯ ಮನೆ ಧ್ವಂಸಗೊಳಿಸಿದ ಇಸ್ರೇಲ್ ಸೈನಿಕರು

Update: 2018-12-17 16:09 GMT

ನಬ್ಲುಸ್ (ಫೆಲೆಸ್ತೀನ್ ಪ್ರದೇಶ), ಡಿ. 17: ಇಬ್ಬರು ಇಸ್ರೇಲಿಗರನ್ನು ಕೊಂದ ಆರೋಪ ಎದುರಿಸುತ್ತಿರುವ ಫೆಲೆಸ್ತೀನ್ ವ್ಯಕ್ತಿಯೊಬ್ಬನ ಮನೆಯನ್ನು ಇಸ್ರೇಲ್ ಸೈನಿಕರು ಸೋಮವಾರ ರಾತ್ರಿ ಧ್ವಂಸಗೊಳಿಸಿದ್ದಾರೆ ಎಂದು ಎಎಫ್‌ಪಿ ಪತ್ರಕರ್ತರೊಬ್ಬರು ಹೇಳಿದ್ದಾರೆ.

ಇಸ್ರೇಲ್ ಸೈನಿಕರು ಹಾರಿಸಿದ ರಬ್ಬರ್ ಗುಂಡುಗಳಿಂದ ಮೂವರು ಗಾಯಗೊಂಡಿದ್ದಾರೆ ಎಂದು ಫೆಲೆಸ್ತೀನ್ ಸುದ್ದಿ ಸಂಸ್ಥೆ ‘ವಫ’ ಹೇಳಿದೆ. ಪಶ್ಚಿಮ ದಂಡೆಯಲ್ಲಿರುವ ಟುಲ್ಕರ್ಮ್ ಉಪನಗರದಲ್ಲಿರುವ ಮನೆಯನ್ನು ಸೋಮವಾರ ರಾತ್ರಿ ಸುತ್ತುವರಿದ ನೂರಾರು ಸೈನಿಕರು ಅದನ್ನು ಧ್ವಂಸಗೈದರು.

23 ವರ್ಷದ ನಾಲ್ವ ಉತ್ತರ ಪಶ್ಚಿಮ ದಂಡಯ ಯಹೂದಿ ಬಡಾವಣೆ ಬರ್ಕಾನ್‌ನಲ್ಲಿನ ಕೈಗಾರಿಕಾ ವಲಯವೊಂದರಲ್ಲಿ ತನ್ನ ಇಬ್ಬರು ಇಸ್ರೇಲಿ ಸಹೋದ್ಯೋಗಿಗಳನ್ನು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.

ಎರಡು ವಾರಗಳ ಶೋಧದ ಬಳಿಕ ಗುರುವಾರ ಇಸ್ರೇಲ್ ಸೇನೆಯು ಆತನನ್ನು ಕೊಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News