×
Ad

ಉಡುಪಿ: 5-6 ಮಂದಿಯಿಂದ ಮರಳುಗಾರಿಕೆ ಪ್ರಾರಂಭ

Update: 2018-12-17 22:04 IST
ಸಾಂದರ್ಭಿಕ ಚಿತ್ರ

ಉಡುಪಿ, ಡಿ.17: ಜಿಲ್ಲೆಯ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಪರವಾನಿಗೆ ಪಡೆದುಕೊಂಡು ಹೋಗಿರುವ 28 ಮಂದಿಯಲ್ಲಿ 5-6 ಮಂದಿ ಇಂದು ಮರಳುಗಾರಿಕೆಯನ್ನು ಪ್ರಾರಂಭಿಸಿದ ವರದಿ ಇದ್ದು, ಅವರ್ಯಾರು ಇಂದು ಮರಳು ಸಾಗಾಟವನ್ನು ಪ್ರಾರಂಭಿಸಿಲ್ಲ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಮರಳು ದಿಬ್ಬ ತೆರವಿಗೆ 2011ಕ್ಕಿಂತ ಹಿಂದೆ ಸಾಂಪ್ರದಾಯಿಕ ಮರಳುಗಾರಿಕೆ ಮಾಡುತ್ತಿದ್ದ 61 ಮಂದಿಯಲ್ಲಿ 45 ಮಂದಿ ಅರ್ಹತೆ ಪಡೆದಿದ್ದಾರೆ. ಇವರಲ್ಲಿ 28 ಮಂದಿ ಎಲ್ಲಾ ಅಗತ್ಯ ದಾಖಲೆಗಳನ್ನು ನೀಡಿ ಹಣವನ್ನು ಪಾವತಿಸಿ ಪರವಾನಿಗೆಯನ್ನು ಪಡೆದುಕೊಂಡಿದ್ದಾರೆ. ಮರಳುಗಾರಿಕೆ ಪ್ರಾರಂಭಿಸಲು ಇವರಿಗೆ ನೀಡಲಾದ ಅಂತಿಮ ಗಡು ಇಂದು ಮುಗಿದಿದ್ದು, ಇಂದು 5-6 ಮಂದಿ ಮರಳುಗಾರಿಕೆ ಪ್ರಾರಂಭಿಸಿರುವ ಮಾಹಿತಿ ಇದೆ.

ಇವರು ಮರಳು ತೆಗೆಯುವ ಕಾರ್ಯ ನಡೆಸಿದ್ದರೂ, ಇನ್ನೂ ಯಾರೂ ಅಲ್ಲಿಂದ ಮರಳಿನ ಸಾಗಾಟ ಪ್ರಾರಂಭಿಸಿಲ್ಲ. ಜಿಲ್ಲೆಯ ಮರಳುಗಾರಿಕೆಯ ಸ್ಪಷ್ಟ ಚಿತ್ರಣ ನಾಳೆ ದೊರೆಯಲಿದೆ ಎಂದವರು ಹೇಳಿದರು. ಪರವಾನಿಗೆ ಪಡೆದೂ ಇನ್ನೂ ಮರಳುಗಾರಿಕೆ ಪ್ರಾರಂಭಿಸದವರಿಗೆ ನೋಟೀಸು ಜಾರಿಗೊಳಿಸುವುದಾಗಿ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News