×
Ad

ಯುನಿವೆಫ್: ಬಿ.ಸಿ. ರೋಡ್ ನಲ್ಲಿ ಸ್ನೇಹ ಸಮ್ಮಿಲನ

Update: 2018-12-18 18:16 IST

ಮಂಗಳೂರು, ಡಿ. 18: ಯುನಿವೆಫ್  ಕರ್ನಾಟಕ ನ. 30 ರಿಂದ ಫೆ. 1 ರ ವರೆಗೆ ಹಮ್ಮಿಕೊಂಡಿರುವ 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಅಭಿಯಾನದ ಪ್ರಯುಕ್ತ ಬಿ.ಸಿ. ರೋಡ್ ನ ಲಯನ್ಸ್ ಸೇವಾ ಮಂದಿರದಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರಗಿತು.

ಸಾಮಾಜಿಕ ರಂಗದಲ್ಲಿ ಮುಂಚೂಣಿಯಲ್ಲಿರುವ ಆಯ್ದ ವ್ಯಕ್ತಿಗಳೊಂದಿಗೆ ಪ್ರಸಕ್ತ ಪರಿಸ್ಥಿತಿಗಳ ಬಗ್ಗೆ ಸಂವಹನ ನಡೆಸಿದ ಯುನಿವೆಫ್  ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರು "ಇಸ್ಲಾಮಿನ ಕುರಿತು ಜನರಿಗೆ ಸರಿಯಾದ ತಿಳುವಳಿಕೆ ಮೂಡಿಸಿದರೆ ಮತ್ತು ಅವರಲ್ಲಿರುವ ಅಪಕಲ್ಪನೆಗಳನ್ನು ದೂರೀಕರಿಸಿದರೆ ಈ ದೇಶದಲ್ಲಿ ಮುಸ್ಲಿಮರು ಅನುಭವಿಸುತ್ತಿರುವ ಅನೇಕ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ಏಕೆಂದರೆ ಯಾವುದೇ ಸಮುದಾಯದ ಅಭಿವೃದ್ಧಿಗಿಂತ ಅಸ್ತಿತ್ವ ಮುಖ್ಯವಾಗಿದೆ." ಎಂದು ಹೇಳಿದರು.

ಆ ಬಳಿಕ ಯುವಕರೊಂದಿಗೆ ಮುಕ್ತ ಚರ್ಚಾ ಕಾರ್ಯಕ್ರಮವೂ ನಡೆಯಿತು. ಕಾರ್ಯದರ್ಶಿ ಯು.ಕೆ. ಖಾಲಿದ್ ಸಂಘಟನೆಯ ಕಾರ್ಯಚಟುವಟಿಕೆಗಳ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾಧ್ಯಕ್ಷ ಮತ್ತು ಅಭಿಯಾನ ಸಂಚಾಲಕ ಅಬ್ದುಲ್ಲಾ ಪಾರೆ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಮುಖ್ತಾರ್ ಅಹ್ಮದ್ ಕಿರ್ ಅತ್ ಪಠಿಸಿದರು. ಅಡ್ವೋಕೇಟ್ ಸಿರಾಜುದ್ದೀನ್ ವಂದನಾರ್ಪಣೆಗೈದರು. ವೇದಿಕೆಯಲ್ಲಿ ಸಮಾಜ ಸೇವಾ ವಿಭಾಗ ಅಭಯ ದ ಸಂಚಾಲಕ ಅಹ್ಮದ್ ಸಕಲೇಶಪುರ ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News