ಮೀನುಗಾರಿಕಾ ಕಾಲೇಜಿನಲ್ಲಿ ‘ರೈತ-ವಿಜ್ಞಾನಿ’ ಸಂವಾದ ಕಾರ್ಯಾಗಾರ

Update: 2018-12-18 15:08 GMT

ಮಂಗಳೂರು, ಡಿ.18: ಮೀನುಗಾರಿಕಾ ಕಾಲೇಜು, ಕೃಷಿ ವಿಜ್ಞಾನ ಕೇಂದ್ರ, ಹೈದರಾಬಾದ್‌ನ ಕೇಂದ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಮತ್ತು ಮೀನುಗಾರಿಕಾ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಸಹಯೋಗದಿಂದ ರೈತ-ವಿಜ್ಞಾನಿ’ ಸಂವಾದ ಕಾರ್ಯಕ್ರಮವು ಕಾಲೇಜಿನ ಪ್ರೊ.ಎಚ್.ಪಿ.ಸಿ.ಶೆಟ್ಟಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಕೃಷಿವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎ.ಟಿ.ರಾಮಚಂದ್ರ ನಾಯ್ಕ ಮಾತನಾಡಿ ಜಿಲ್ಲೆಯ ರೈತರಿಗೆ ಕೃಷೊಯಲ್ಲಿ ತಾಂತ್ರಿಕ ವಿಧಾನಗಳ ಬಳಕೆ ಮತ್ತು ಅವುಗಳ ಅಳವಡಿಕೆಯಿಂದ ಲಾಭಗಳಿಸುವ ಬಗ್ಗೆ ಪ್ರಸ್ತಾಪಿಸಿ ಕೃಷಿಯೊಟ್ಟಿಗೆ ಮೀನು, ಹಂದಿ, ಕೋಳಿ, ಜಾನುವಾರು ಮತ್ತು ತರಕಾರಿ ಬೆಳೆಗಳನ್ನು ಬೆಳೆಸುವ ಸಮ್ಮಿಶ್ರ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.

ಮೀನುಗಾರಿಕಾ ಕಾಲೇಜಿನ ಡೀನ್ ಡಾ.ಎಚ್. ಶಿವಾನಂದ ಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೂಡಿಗೆರೆಯ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಸುಭಾಷ್‌ಚಂದ್ರ ಚೌಟ ಮತ್ತು ಮಾಜಿ ಅಧ್ಯಕ್ಷ ಹಾಗೂ ಪ್ರಗತಿಪರ ರೈತ ರಾಜವರ್ಮ ಬೈಲಂಗಡಿ, ಸಿಗಡಿ ಕೃಷಿಕ ಸ್ಟೀವನ್ ಡಿಸೋಜ ಮತ್ತಿತರರು ಅನುಭವಗಳನ್ನು ಹಂಚಿಕೊಂಡರು.

ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಒಳನಾಡು ಮೀನುಗಾರಿಕಾ ಘಟಕದ ಮುಖ್ಯಸ್ಥ ಡಾ.ಬಿ.ವಿ.ಕೃಷ್ಣಮೂರ್ತಿ, ಕಾಲೇಜಿನ ಸಹ ವಿಸ್ಥರಣಾ ನಿರ್ದೇಶಕ ಡಾ.ಶಿವಕುಮಾರ್ ಎಂ., ಕೇಂದ್ರೀಯ ಮೀನುಗಾರಿಕಾ ಸಂಸ್ಥೆಗಳಾದ ಹಿನ್ನೀರು ಜಲಕೃಷಿ, ಕಡಲ ಸಂಶೋಧನೆ ಮತ್ತು ಸಾಗರೋತ್ಪನ್ನ ರಫ್ತು ಪ್ರಾಧಿಕಾರಗಳ ವಿಜ್ಞಾನಿಗಳಾದ ತನ್ವೀರ್ ಹುಸೈನ್, ಡಾ. ಪುರುಶೋತ್ತಮ ಮತ್ತು ವಿಜಯ್‌ಕುಮಾರ್ ಯರ್ಗಲ್ ಮಾತನಾಡಿದರು.

ಕಾಲೇಜಿನ ಮತ್ಸ್ಯ ಸಂಪನ್ಮೂಲ ನಿರ್ವಹಣೆ ವಿಭಾಗದ ಮುಖ್ಯಸ್ಥ ಡಾ.ಎಸ್.ಎಂ.ಶಿವಪ್ರಕಾಶ್, ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ (ಕೋಫಾ) ಕಾರ್ಯದರ್ಶಿ ಡಾ. ಎಸ್.ಆರ್. ಸೋಮಶೇಖರ್, ಮೀನುಗಾರಿಕಾ ವಿಭಾಗದ ಮುಖ್ಯಸ್ಥ ಡಾ. ಗಂಗಾಧರ ಗೌಡ ಉಪಸ್ಥಿತರಿದ್ದರು.

ಬೇಸಾಯ ಶಾಸ್ತ್ರದ ತಜ್ಞ ಹರೀಶ ಶೆಣೈ , ಮೀನುಗಾರಿಕೆಯ ವಿಷಯ ತಜ್ಞ ಗಣೇಶ್ ಪ್ರಸಾದ್ ಎಲ್., ಮಣ್ಣು ಪರಿಕ್ಷೆಯ ಸಹಾಯಕಿ ಯಶಶ್ರೀ, ಕಾಯಕ್ರಮ ಸಹಾಯಕ ಸತೀಶ್ ನಾಯಕ್ ಮತ್ತು ಕೃಷಿ ಕೇಂದ್ರದ ಸಿಬ್ಬಂದಿಗಳಾದ ದೀಪಾ, ಸೀತಾರಾಮ, ಸೋಮಶೇಖರಯ್ಯ ಎಸ್.ಎಂ., ಅಶ್ವಿತ್ ಕುಮಾರ್, ಕೇಶವ ಮತ್ತು ವಿದ್ಯಾವತಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News