ಉಡುಪಿ: 23ಕ್ಕೆ ಜ್ಯೋತಿರ್ವಿಜ್ಞಾನ ತರಗತಿಗಳ ಉದ್ಘಾಟನೆ

Update: 2018-12-18 16:36 GMT

ಉಡುಪಿ, ಡಿ.18: ಅಪಾರ ಹಾಗೂ ಅಗಾಧ ಸಾಧ್ಯತೆಗಳುಳ್ಳ ಜ್ಯೋತಿರ್ವಿಜ್ಞಾನವನ್ನು ವೈಜ್ಞಾನಿಕ ನೆಲೆಯಲ್ಲಿ ವಿಸ್ತರಿಸಲು ಕಾರ್ಯವೆಸಗುತ್ತಿರುವ ಭಾರತೀಯ ಜ್ಯೋತಿರ್ವಿಜ್ಞಾನ ಪರಿಷತ್‌ನ ಶಾಖೆಯೊಂದು ಉಡುಪಿಯಲ್ಲಿ ಅಸ್ತಿತ್ವಕ್ಕೆ ಬರಲಿದ್ದು, ಜ್ಯೋತಿರ್ವಿಜ್ಞಾನ ತರಗತಿಗಳ ಉದ್ಘಾಟನಾ ಸಮಾರಂಭ ಡಿ. 23ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಪರಿಷತ್‌ನ ರಾಷ್ಟ್ರೀಯ ಗೌರವ ಉಪಾಧ್ಯಕ್ಷ ಎ.ನರಸಿಂಹ ಅಲ್ಸೆ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಸಂಸ್ಥೆಯನ್ನು ಡಾ.ಬಿ.ವಿ.ರಾಮನ್ ಅವರು 1984ರಲ್ಲಿ ಸ್ಥಾಪಿಸಿದ್ದು, ಇದಕ್ಕೆ ದೇಶಾದ್ಯಂತ ಇಂದು 45 ಶಾಖೆಗಳಿವೆ ಎಂದರು. ಇದೀಗ ಉಡುಪಿಯಲ್ಲಿ ಜ್ಯೋತಿರ್ವಿಜ್ಞಾನದ ತರಗತಿಗಳ ಉದ್ಘಾಟನೆ ಡಿ.23ರ ಅಪರಾಹ್ನ 2:30ಕ್ಕೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಇದನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಹೊಸದಿಲ್ಲಿಯ ಐಎಎಸ್ ಅಧಿಕಾರಿ ಇಂಡಿಯನ್ ಕೌನ್ಸಿಲ್ ಆಫ್ ಆಸ್ಟ್ರಾಲಾಜಿಕಲ್ ಸೈನ್ಸ್‌ನ ರಾಷ್ಟ್ರೀಯ ಗೌರವ ಅಧ್ಯಕ್ಷ ಎ.ಬಿ.ಶುಕ್ಲ ಮುಖ್ಯ ಅತಿಥಿಯಾಗಿರುವರು ಎಂದರು.

ಐಕಾಸ್ ಸಿಕಂದರಾಬಾದ್‌ನ ರಾ.ಕಾರ್ಯದರ್ಶಿ ಗೋಪಾಲಕೃಷ್ಣ ವಿ., ಉಡುಪಿ ಎಸ್‌ಎಂಎಸ್‌ಪಿ ಸಂಸ್ಕೃತ ಕಾಲೇಜಿನ ಪ್ರಾಚಾರ್ಯ ಡಾ.ಎನ್. ಲಕ್ಷ್ಮೀನಾರಾಯಣ ಭಟ್ ಹಾಗೂ ಬಾಲಾಜಿ ರಾಘವೇಂದ್ರ ಆಚಾರ್ಯ ಅತಿಥಿ ಗಳಾಗಿ ಉಪಸ್ಥಿತರಿರುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಘಟಕದ ಕೆ.ರಾಜೇಂದ್ರ, ಕಾರ್ಯದರ್ಶಿ ಮಹೇಶ್ ಕುಮಾರ್, ಸಂಚಾಲಕ ಅರುಣ್‌ಕುಮಾರ್ ಹಾಗೂ ಸುಬ್ರಹ್ಮಣ್ಯ ಬಾಸ್ರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News